
ಹೊಸನಗರ:ಶ್ರೇಷ್ಠ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ಹರಿಕಾರ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರ ಮೌಳಿ ತಿಳಿಸಿದರು. ಹೊಸನಗರ ಕಾಂಗ್ರೆಸ್ ಕಚೇರಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಅವರು ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಿದ, ಐಟಿ - ಬಿಟಿ ಕ್ರಾಂತಿಗೆ ನಾಂದಿ ಹಾಡಿ ವಿಶ್ವವೇ ಭಾರತದತ್ತ ತಿರುಗುವಂತೆ ಮಾಡಿ, ಹಲವಾರು ಜನಪರ ಯೋಜನೆಗಳನ್ನು ನೀಡಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.

ಈ ಸಂದರ್ಭದಲ್ಲಿ ಟೌನ್ ಘಟಕದ ಅಧ್ಯಕ್ಷರಾದ ಗುರುರಾಜ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ, ಸದಾಶಿವ, ಪ್ರಭಾಕರ್. ಎಂಪಿ ಸುರೇಶ್, ಅಶ್ವಿನಿ ಕುಮಾರ್, ಗುರುರಾಜ್, ಕೃಷ್ಣಮೂರ್ತಿ, ಸುರೇಶ್ ಕುಮಾರ್, ಟೀ ಕಪ್ಪ, ಗುರು ಜಯನಗರ ಮುಂತಾದವರು ಉಪಸ್ಥಿತರಿದ್ದರು...
MANMOHAN SINGH
Discover more from Prasarana news
Subscribe to get the latest posts sent to your email.
