
ಹೊಸನಗರ: ಜಗದ ಕತ್ತಲು ಮತ್ತು ಯುಗದ ಕತ್ತಲು ಕಳೆಯುವುದಕ್ಕಾಗಿಯೇ ಶ್ರೀ ರಾಮನ ಜನ್ಮವು ಈ ಪವಿತ್ರ ಭೂಮಿಯಲ್ಲಿ ಆಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಹೊಸನಗರ ತಾಲ್ಲೂಕಿನ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ರಥೋತ್ಸವ ಸಂದರ್ಭದಲ್ಲಿ ಅವರು ರಥಾರೋಹಣಗೈದು ಸಂದೇಶ ನೀಡಿದರು.
ರಾಮ ಸ್ವತಃ ಧರ್ಮಯುಕ್ತ ಜೀವನ ನಡೆಸಿದ ಮಹಾಪುರುಷ ಎಲ್ಲಾ ಯುಗಕ್ಕೂ ಎಲ್ಲಾ ಕಾಲಕ್ಕು ಅವನ ಜೀವನ ಮಾದರಿ ಮತ್ತು ಜಗತ್ತಿನ ಎಲ್ಲರಿಗೂ ಆದರ್ಶವಾಗಿದೆ ಎಂದರು.
ತ್ರೇತಾಯುಗದಲ್ಲಿ ರಾಮ ಆಕಾಶದಿಂದ ಧರೆಗಿಳಿದವ, ಸೀತೆ ಭೂಮಿಯಿಂದ ಮೇಲೆದ್ದವಳು. ಹಾಗಾಗಿಯೇ ರಾಮ ನಡೆದ ಧರ್ಮಯುಕ್ತ ಜೀವವನ್ನು ನಡೆಸುವ ಸಂಕಲ್ಪಯೊಂದಿಗೆ ನಾವು ನಡೆದರೆ ಲಕ್ಷ್ಮೀ ಸ್ವರೂಪಳಾದ ಸೀತಾದೇವಿ ನೆಮ್ಮದಿಯ ಜೀವನವನ್ನು ಕರುಣಿಸುತ್ತಾಳೆ ಎಂದ ಅವರು ರಥೋತ್ಸವ ಇದಕ್ಕೆ ಸಂಕೇತ. ನಾವು ನಮ್ಮ ಜೀವನದಲ್ಲಿ ಮೇಲೇರಬೇಕು.
ಅದಕ್ಕೆ ಪ್ರೇರಣಾದಾಯಕವಾದ ಕಾರ್ಯಕ್ರಮವೇ ರಥೋತ್ಸವ.
ರಥ ಏರಿದ ರಾಮನನ್ನು ನೋಡಿದರೆ ಪುನರ್ ಜನ್ಮವಿಲ್ಲದ ಪುಣ್ಯ ಲಭ್ಯ ಎಂಬ ಮಾತಿದೆ. ಅಂತೆಯೆ ಅಂತಹ ಪುಣ್ಯವನ್ನು ಪಡೆಯುವ ಮನಸ್ಥಿತಿಯನ್ನು ನಾವೆಲ್ಲಾ ಹೊಂದಬೇಕು ಎಂದು ಹೇಳಿದರು.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಅಸಂಖ್ಯಾತ ಶಿಷ್ಯಭಕ್ತರು ರಥದ ತೇರನ್ನು ಎಳೆದು ಧನ್ಯತೆ ಹೊಂದಿದರು.
ರಾಮೋತ್ಸವ ಸಮಿತಿ, ಮಹಾಮಂಡಲ, ಮಂಡಲ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ನಂತರ ಸೀತಾಕಲ್ಯಾಣೋತ್ಸವ ಜರುಗಿತು. ರಾಮನ ದಿಬ್ಬಣ ಎದುರುಗೊಳ್ಳುವ ವಿಶೇಷ ಸನ್ನಿವೇಶ ಆಕರ್ಷಣೀಯವಾಗಿತ್ತು. ನಂತರ ಸಂಜೆ ರಾಮಲೀಲಾ ರಾವಣ ದಹನ ಕಾರ್ಯಕ್ರಮ ಜರುಗಿತು.
RAGHAVESHWARA BHARATHI.
Discover more from Prasarana news
Subscribe to get the latest posts sent to your email.
