
ಹೊಸನಗರ: ಕಳ್ಳತನ ಆಗಿದ್ದ ಅಥವಾ ಕಳೆದು ಹೋಗಿದ್ದ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿ ಅದರ ವಾರಸುದಾರರಿಗೆ ಮರಳಿಸುವ ಕೆಲಸವನ್ನು ಹೊಸನಗರ ಪೊಲೀಸ್ ಇಲಾಖೆ ಮಾಡಿದೆ.
ಮಾರ್ಚ್ 20ರಂದು ತಮ್ಮ ಮೊಬೈಲ್ ಕಳೆದು ಹೋಗಿರುವ ಬಗ್ಗೆ ಸುಧೀಂದ್ರ ಪಂಡಿತ್ ಎಂಬುವರು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು ಕೂಡಲೇ CEIR ಪೋರ್ಟಲ್ ಮೂಲಕ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕಾರ್ಯಪ್ರವೃತ್ತರಾಗಿ ಕೆಲ ದಿನಗಳ ಒಳಗಾಗಿಯೇ ಕಳೆದುಹೋದ ಮೊಬೈಲನ್ನು ಪತ್ತೆ ಹಚ್ಚಿ ಮೂಲ ಮಾಲೀಕರಿಗೆ ಅದನ್ನು ತಲುಪಿಸಿದ್ದಾರೆ.
ಈ ಕುರಿತಾಗಿ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದ ಹೊಸನಗರ ಪೊಲೀಸ್ ಠಾಣಾ ಪಿಎಸ್ಐ ಶಂಕರ್ ಗೌಡ ಪಾಟೀಲ್ ಮೊಬೈಲ್ ಫೋನ್ ಕಳ್ಳತನ ವಾಗಲಿ ಕಳೆದು ಹೋಗಲಿ ಅದರ ಮಾಲೀಕರು ಸಿಇಐಆರ್ ಪೋರ್ಟಲ್ ಮೂಲಕ ದೂರನ್ನು ದಾಖಲಿಸಿದರೆ ದೂರು ದಾಖಲಾದ 24 ಗಂಟೆ ಒಳಗಾಗಿ ಕಳೆದು ಹೋದ ಮೊಬೈಲ್ ಫೋನನ್ನು ಬ್ಲಾಕ್ ಮಾಡಲಾಗುವುದು ತಪ್ಪಿದಲ್ಲಿ ಆ ಫೋನನ್ನು ಯಾರಾದರೂ ಬಳಕೆ ಮಾಡಿದರೆ ಅವರ ವಿವರವೂ ದೊರಕುತ್ತದೆ ಇದರಿಂದ ಕಳೆದು ಹೋದ ಮೊಬೈಲ್ ಫೋನ್ ಗಳನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯ ಸಾರ್ವಜನಿಕರು ಈ ಪೋರ್ಟಲ್ ನ ಪಡೆದುಕೊಳ್ಳುವಂತೆ ಮನವಿಯನ್ನು ಮಾಡಿದರು.
ಠಾಣೆ ಬದಲಿಗೆ ಈ ಬ್ಲಾಗ್‌ಗೆ ಭೇಟಿ ಕೊಡಿ!
ಸಾರ್ವಜನಿಕರು ಮೊಬೈಲ್ ಫೋನ್ ಕಳೆದು ಹೋದರೆ ದೂರು ಕೊಡಲು ಠಾಣೆಗೆ ಹೋಗಬೇಕಿಲ್ಲ. ಬದಲಿಗೆ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಅಪ್ಲಿಕೇಶನ್ ಮೂಲಕ ದೂರು ದಾಖಲಿಸಿ ಸ್ವೀಕೃತಿ ಪಡೆಯಬಹುದು. https://www.ceir.gov.in ವೆಬ್ ಪೋರ್ಟಲ್ ಭೇಟಿ ನೀಡಿ block stolen/Lost Mobile ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಫಾರಂನಲ್ಲಿ ಕಳೆದು ಹೋದ ಮೊಬೈಲ್ ಫೋನಿನ IMEI ನಂಬರ್ ಹಾಗೂ ಮೊಬೈಲ್ ಫೋನ್ ನಂಬರ್ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ ದೂರು ದಾಖಲಿಸಬಹುದಾಗಿದೆ.
PRASARANANEWS..
Discover more from Prasarana news
Subscribe to get the latest posts sent to your email.
