
ಹೊಸನಗರ: ತೋಟಕ್ಕೆ ಅಳವಡಿಸಿದ್ದ ಮೋಟಾರ್ ಕಳ್ಳತನ ಮಾಡಿದ ಮೂರು ಜನ ಆರೋಪಿಗಳನ್ನು ಗಳನ್ನು ಹೊಸನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಅರಳಿಕೊಪ್ಪ ಗ್ರಾಮದ ಸುಮನ್ ಅಂಬೇಡ್ಕರ್ ಕಾಲೋನಿ ಆರಳಿಕೊಪ್ಪ, ಸಂತೋಷ್ ಭೂವಿ ಕಾಲೋನಿ ಅರಳಿಕೊಪ್ಪ , ನಾರಾಯಣ್ ಅಂಬೇಡ್ಕರ್ ಕಾಲೋನಿ ಅರಳಿಕೊಪ್ಪ , ಬಂದಿತ ಆರೋಪಿಗಳು ತಾಲೂಕಿನ ಕಸಬಾ ಹೋಬಳಿಯ ಮಸಗಲ್ಲಿ ಗ್ರಾಮದ ಸರ್ವೆ ನಂಬರ್ 16ರಲ್ಲಿ ಇರುವ ತೋಟದ ಬಾವಿಗೆ ಅಳವಡಿಸಲಾಗಿದ್ದ ಎರಡು ಹೆಚ್ ಪಿ ಬೋರ್ವೆಲ್ ಮೋಟರ್ ಹಾಗೂ ಕೆರೆಗೆ ಅಳವಡಿಸಲಾಗಿದ್ದ ಮೂರು ಹೆಚ್ ಪಿ ಸಬ್ಮರ್ಸಿಬಲ್ ಮೋಟರ್ ಕಳ್ಳತನವಾದ ಹಿನ್ನೆಲೆ ಏಪ್ರಿಲ್ 26ರಂದು ದೂರು ದಾಖಲಾಗಿತ್ತು ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಶೀಘ್ರ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಗೌಡಪ್ಪಗೌಡ ಮಾರ್ಗದರ್ಶನದಲ್ಲಿ ಹೊಸನಗರ ಪೊಲೀಸ್ ಠಾಣಾ ಪಿಎಸ್ ಐ ಶಂಕರ್ ಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಮಾಯಪ್ಪ ಗೋಕಾವಿ, ಸಂದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
PRASARANANEWS..
Discover more from Prasarana news
Subscribe to get the latest posts sent to your email.
