HOUSE:ನಿರ್ಗತಿಕ ಕುಟುಂಬಕ್ಕೆ ಬೆಳಕಾದ ಗೋಪಾಲಕೃಷ್ಣ ಬೇಳೂರು ಹಾಗೂ ಆಸರೆ ಸಮಿತಿ….

ಹೊಸನಗರ: ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಆಸರೆ ಸಮಿತಿ ಮತ್ತು ಗ್ರಾಮದ ಕೆಲ ಉತ್ಸಾಹಿ ದಾನಿಗಳ ಶ್ರಮ, ಸೇವೆಯಿಂದ ವಾಸಿಸಲು ಮನೆ ಇಲ್ಲದ್ದೆ ಜೀವನ ಸಾಗಿಸುತ್ತಿದ್ದ ನಿರ್ಗತಿಕ ಕುಟುಂಬವೊಂದಕ್ಕೆ ಸೂರೊಂದು ದೊರಕಿದೆ.
ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲಿನ ಸಂಪಳ್ಳಿ ಗ್ರಾಮದ ಶಶಿಕಲಾ ಭೋಜಪ್ಪ ಎಂಬ ಅನಾರೋಗ್ಯ ಪೀಡಿತ ಅಂಗವಿಕಲ ಮಗಳನ್ನು ಹೊಂದಿರುವ ಮಹಿಳೆಗೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಮತ್ತು ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲ ಪ್ರಮುಖರನ್ನ ಒಳಗೊಂಡ ಆಸರೆ ಸಮಿತಿ ಸರಿಸುಮಾರು 6.5 ಲಕ್ಷ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಬಡ ಕುಟುಂಬಕ್ಕೆ ಬುಧವಾರ ಹಸ್ತಾಂತರಿಸಿದೆ.


ವಿಶೇಷ ಪೂಜೆ ಮೂಲಕ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಿ ಮಾತನಾಡಿದ ಆಸರೆ ಸಮಿತಿ ಅಧ್ಯಕ್ಷ ಚಿದಂಬರ ಹೂವಿನ ಕೋಣೆ ಈ ಹಿಂದೆ ಮೇಲಿನ ಸಂಪಳ್ಳಿ ಗ್ರಾಮದಲ್ಲಿ ಒಬ್ಬ ಮಹಿಳೆ ಹಾಗೂ ಆಕೆಯ ಅಂಗವಿಕಲ ಮಗಳು ಸರಿಯಾದ ಆಸರೆ ಇಲ್ಲದೆ ವಾಸಿಸಲು ಮನೆ ಇಲ್ಲದೆ ನಿರ್ಗತಿಕರಾಗಿದ್ದು ಅವರು ಯಾವುದೇ ಸರ್ಕಾರದ ಸೌಲಭ್ಯವನ್ನು ಪಡೆದಿಲ್ಲ ಹಾಗೂ ಆ ಕುಟುಂಬ ಬಹಳಷ್ಟು ಸಂಕಷ್ಟದಲ್ಲಿದೆ ಎಂಬ ವರದಿ ಪತ್ರಿಕೆಯಲ್ಲಿ ಬಿತ್ತರವಾಗಿತ್ತು ಇದನ್ನು ಮನಗೊಂಡ ನಾವು ಈ ವಿಷಯವನ್ನು ಶಾಸಕರಾದ ಗೋಪಾಲಕೃಷ್ಣ ಬೇಳೂರು ಗಮನಕ್ಕೆ ತಂದಿದ್ದು ಕೂಡಲೇ ಅವರು ಗ್ರಾಮಕ್ಕೆ ಆಗಮಿಸಿ, ಅದೇ ದಿನ ಮನೆ ನಿರ್ಮಾಣಕ್ಕಾಗಿ 50,000ಗಳನ್ನ ಕುಟುಂಬಕ್ಕೆ ನೀಡಿದರು ಆ ಹಣದಿಂದ ಮನೆಯ ಕೆಲಸವನ್ನು ಆರಂಭಿಸಿದ್ದು ಬಳಿಕ ಈ ಗ್ರಾಮದ ಸ್ಥಳೀಯ ಕೆಲ ಜನಪ್ರತಿನಿಧಿಗಳನ್ನು ಒಳಗೊಂಡ ಒಂದು ಆಸರೆ ಸಮಿತಿಯನ್ನು ರಚಿಸಿ ಅದರ ಮೂಲಕವಾಗಿ ಒಂದಿಷ್ಟು ದೇಣಿಗೆಯನ್ನು ಸಂಗ್ರಹಿಸಿ ಸಮಿತಿಯ ಸದಸ್ಯರು ಸಹ ವೈಯಕ್ತಿಕವಾಗಿ ಒಂದಿಷ್ಟು ಹಣವನ್ನ ಸೇರಿಸಿ ಜೊತೆಗೆ ಸರ್ಕಾರ್ದಿಂದ 2 ಲಕ್ಷ ರೂಗಳನ್ನು  ಮನೆ ನಿರ್ಮಾಣಕ್ಕೆ ಪಡೆದು ಈ ಒಂದು ಕಾರ್ಯವನ್ನ ಸಂಪೂರ್ಣಗೊಳಿಸಿದ್ದೇವೆ 2023 ರಲ್ಲಿ ಆರಂಭಗೊಂಡ ಈ ಮನೆಯಲ್ಲಿ ನಿರ್ಮಾಣ ಕಾಮಗಾರಿ ಒಂದಿಷ್ಟು ಸಮಯ ಕೆಲ ಕಾರಣಗಳಿಂದ ಸ್ಥಗಿತಗೊಂಡಿತು ಬಳಿಕ ಇಂದು ಅದನ್ನು ಪೂರ್ಣಗೊಳಿಸಿ ಬಡ ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ ಈ ಕಾರ್ಯಕ್ರಮದಲ್ಲಿ ನಮ್ಮ ಶಾಸಕರು ಪಾಲ್ಗೊಳ್ಳಬೇಕಿದ್ದು ಅವರ ತುರ್ತು ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದು ಅವರ ನಿರ್ದೇಶನದಂತೆ ಈ ದಿನ ಕುಟುಂಬಕ್ಕೆ ಮನೆಯನ್ನು ಹಸ್ತಾಂತರಿಸಿರುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ ಆಸರೆ ಸಮಿತಿ ಸದಸ್ಯರಾದ ದೀಪಿಕಾ, ಅವಿನಾಶ್, ಚಿನ್ನಪ್ಪ, ಕೃಷ್ಣ ಮೂರ್ತಿ, ನಾರಾಯಣಪ್ಪ ಗ್ರಾಮಸ್ಥರಾದ ರವಿ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.

HOUSE..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading