
ಹೊಸನಗರ: ಎಸ್ಐಆರ್ ಎನ್ನುವುದು ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ನವೀಕರಿಸಲು ಕೈಗೊಂಡ ಪ್ರಕ್ರಿಯೆ ಅಲ್ಲ ಅದು ಮತದಾರರನ್ನು ಮತದಾನದಿಂದ ಹೊರಗಿಡುವ ಪ್ರಕ್ರಿಯೆಯಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಮಂಗಳವಾರ ಪಟ್ಟಣದ ಗಾಂಧಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೃತಪಟ್ಟವರು ಮತ್ತು ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಇದರ ಮುಖ್ಯ ಉದ್ದೇಶವಾಗಿದ್ದರೂ, ಪ್ರಕ್ರಿಯೆಯಲ್ಲಿನ ದೋಷಗಳಿಂದಾಗಿ ಅರ್ಹ ಮತದಾರರ ಹೆಸರುಗಳು ಪಟ್ಟಿ ಇಂದ ಕೈಬಿಟ್ಟು ಹೋಗುತವೆ ಎಂದು ಆರೋಪಿಸಿದರು ಜೂ.30ರಿಂದ ಆ.5ರೊಳಗೆ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸದವರಿಗೆ ಮತದಾನದ ಹಕ್ಕೇ ಇರುವುದಿಲ್ಲ. ಸರ್ಕಾರದ ಸವಲತ್ತುಗಳಿಂದಲೂ ಅವರು ವಂಚಿತರಾಗುತ್ತಾರೆ. ದಲಿತರು, ಅಲ್ಪಸಂಖ್ಯಾತರು, ಅನಕ್ಷರಸ್ಥರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದೇ ಬಿಜೆಪಿ ಮುಖ್ಯ ಉದ್ದೇಶ ವಾಗಿದೆ ಎಂದರು.
ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ರಾಜಕೀಯ ತಂತ್ರಗಾರಿಕೆ ಹೂಡಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಿಂದ ಆಗುವ ಅನಾಹುತದ ಬಗ್ಗೆ ಅನಕ್ಷರಸ್ಥರು ಮಾತ್ರವಲ್ಲದೆ ವಿದ್ಯಾವಂತರಿಗೂ ಸರಿಯಾದ ಮಾಹಿತಿ ಇಲ್ಲದ ಕಾರಣ ಮತದಾನದಿಂದ ವಂಚಿತರಾಗುವುದು ಖಚಿತ. ಆ.5ರೊಳಗೆ ಅರ್ಜಿ ಸಲ್ಲಿಸಬೇಕು ಅಥವಾ ಸಮೀೆಗಾಗಿ ಮನೆಗಳಿಗೆ ಬರುವ ಬಿಎಲ್ಒಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಅವೈಜ್ಞಾನಿಕ ಪರಿಷ್ಕರಣೆ ಬಗ್ಗೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿಗೆ ನೀಡಿದ್ದು ಇದ್ದಕೆ ಜನಜಾಗೃತಿಯೊಂದೇ ಪರಿಹಾರ ವಾಗಿದೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರ ಮೌಳಿ ಮುಖಂಡರಾದ, ಪ್ರಭಾಕರ್, ಮಹಾಬಲ ರಾವ್, ಬಂಡಿ ರಾಮಚಂದ್ರ, ಏರಗಿ ಉಮೇಶ್, ಅಶ್ವಿನಿ ಕುಮಾರ್, ಸದಾಶಿವ ಶೆಟ್ಟಿ, ಕರುಣಾಕರ್ ಶೆಟ್ಟಿ, ಪೂರ್ಣೇಶ್, ಗುರು ಜಯನಗರ ಮುಂತಾದವರು ಉಪಸ್ಥಿತರಿದ್ದರು
S I R...
Discover more from Prasarana news
Subscribe to get the latest posts sent to your email.
