
ಹೊಸನಗರ: ತಾಲೂಕು ಒಕ್ಕಲಿಗರ ಸಂಘ(ರಿ) ಹೊಸನಗರ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು ಅರ್ಹರಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ.
ಸಂಘದ ಸದಸ್ಯರ ಮಕ್ಕಳನ್ನ ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 2026 ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇಕಡ 95ಕ್ಕೂ ಹೆಚ್ಚು ಅಂಕವನ್ನ ಪಡೆದ ಸಂಘದ ಸದಸ್ಯರ ಮಕ್ಕಳು ಈ ಪುರಸ್ಕಾರಕ್ಕೆ ಅರ್ಹರಾಗಿದ್ದು ಕೆಳಗೆ ನೀಡಲಾದ ದೂರವಾಣಿ ಸಂಖ್ಯೆಗೆ ದಿನಾಂಕ 25-05-2026 ರ ಒಳಗಾಗಿ ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳುವಂತೆ ಸಂಘದ ಅಧ್ಯಕ್ಷರಾದ ಹಾಲಗದ್ದೆ ಉಮೇಶ್
ಕೋರಿದ್ದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿನಾಂಕವನ್ನು ಸಮಿತಿ ಸಭೆಯ ತೀರ್ಮಾನ ಬಳಿಕ ತಿಳಿಸುವುದಾಗಿ ಹೇಳಿದ್ದಾರೆ.
ನೋಂದಾವಣೆ ಮಾಡಿಕೊಳ್ಳುವ ದೂರವಾಣಿ ಸಂಖ್ಯೆ: 9900406360
TALENT AWARD...
Discover more from Prasarana news
Subscribe to get the latest posts sent to your email.
