T R KRISHNANPPA:              ರಸ್ತೆ ಕಾಮಗಾರಿ ವಿಳಂಬಕ್ಕೆ ಸಾಮಾಜಿಕ ಹೋರಾಟಗಾರ ಟಿಆರ್ ಕೃಷ್ಣಪ್ಪ ಆಕ್ರೋಶ..

ಹೊಸನಗರ: ತಾಲೂಕಿನ ರಿಪ್ಪನ್ ಪೇಟೆಯ ಪೊಲೀಸ್ ವಸತಿ ಗೃಹಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಆಗ್ರಿಸಿದರು.
ಇಂದು ಹೊಸನಗರ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ 2019ರಲ್ಲಿ ರೀಪ್ಪನ್ ಪೇಟೆಯ ಪೊಲೀಸ್ ವಸತಿಗೃಹಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲು ವಿಧಾನಸೌಧದಿಂದ ಅಧಿಕೃತ ಅನುಮತಿ ತಂತ್ರವನ್ನು ತಂದಿದ್ದರು ಜಿಲ್ಲಾಡಳಿತ ಅಲ್ಲಿಂದ ಈವರೆಗೂ ಕಾಮಗಾರಿಯನ್ನು ಆರಂಭಿಸದೆ ವಿಳಂಬ ಮಾಡುತ್ತಿದೆ ಈ ಕುರಿತಾಗಿ ಹಲವು ಬಾರಿ ಪ್ರತಿಭಟಿಸಿದರು ಯಾವುದೇ ಉಪಯೋಗವಾಗಿಲ್ಲ ಈ ಇಟ್ಟಿನಲ್ಲಿ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಈ ದಿನ ಈ ವಿಷಯವನ್ನು ಮಾಧ್ಯಮ ಹಾಗೂ ಸಾರ್ವಜನಿಕರ ಮುಂದೆ ಪ್ರಸ್ತಾಪಿಸುವ ಉದ್ದೇಶದಿಂದ ಸಂತೆ ಮಾರುಕಟ್ಟೆಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದೇನೆ ಎಂದರು.
ಸಾರ್ವಜನಿಕರ ಅನುಕೂಲಕ್ಕಾಗಿ ನಾನು ಸ್ವತಃ ರಸ್ತೆ ಕಾಮಗಾರಿಯನ್ನು ಆರಂಭಿಸಲು ಮುಂದಾದ ವೇಳೆ ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಕಾಮಗಾರಿ ನಡೆಸಿದಂತೆ ತಡೆಹಿಡಿದಿದ್ದರು ಆದರೆ ಇದರ ಹಿಂದಿನ ಸ್ಪಷ್ಟವಾದ ಕಾರಣ ನನಗಿನ್ನು ತಿಳಿದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸಾರ್ವಜನಿಕರಿಗೆ ಮೂಲಸೌಕರ್ಯಗಳ ಕೊರತೆ ಉಂಟಾದಲ್ಲಿ ನಾನು ಸುಮ್ಮನಿರುವ ಪ್ರಶ್ನೆ ಇಲ್ಲ ಹಿಂದಿನಿಂದಲೂ ಹೋರಾಟವನ್ನು ಮೈಗೂಡಿಸಿಕೊಂಡಿರುವ ನನಗೆ ಮುಂದೆಯೂ ಸಹ ಜನಪರವಾದ ಹೋರಾಟಕ್ಕೆ ಸದಾ ಸಿದ್ಧನಿದ್ದು ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಬೇಕು ಇಲ್ಲವಾದಲ್ಲಿ ಈ ಕುರಿತಾದ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಎಚ್ಚರಿಕೆಯನ್ನು ನೀಡಿದರು.

T R KRISHNANPPA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading