PRASARANANEWS:ಹೊಸನಗರ ವೀರಾಂಜನೇಯ ದೇವಸ್ಥಾನದ ಹುಂಡಿ ಹಣ ಕಳವು.. ಪ್ರಕರಣ ದಾಖಲು..

ಹೊಸನಗರ: ಏಪ್ರಿಲ್ 30. ಪಟ್ಟಣದ ಹೊಸನಗರ ನಗರ ಮುಖ್ಯ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನ ಬೀಗ ಮುರಿದು ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯ ಕಳವು ಮಾಡಿರುವುದಾಗಿ ದೂರು ನೀಡಲಾಗಿದೆ.


ಎಂದಿನಂತೆ ಅರ್ಚಕರು ಏಪ್ರಿಲ್ 29 ರ ರಾತ್ರಿ 8 ಗಂಟೆಗೇ ಪೂಜಾ ಕಾರ್ಯ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ತೆರಳಿದ್ದರು ಮರು ದಿನ ಅಂದರೆ ಏಪ್ರಿಲ್ 30 ರ ಬೆಳಿಗ್ಗೆ ಎಂಟು ಗಂಟೆಗೆ ಅರ್ಚಕರು ದೇವಸ್ಥಾನಕ್ಕೆ ಆಗಮಿಸಿದ್ದು ಈ ವೇಳೆ ದೇವಸ್ಥಾನದ ಬೀಗ ಮುರಿದು ಮೂರು ಕಾಣಿಕೆ ಹುಂಡಿಗಳ ಹಣವನ್ನು ತೆಗೆದಿದ್ದು ಬೆಳಕಿಗೆ ಬಂದಿರುತ್ತದೆ ಕಳ್ಳರು ದೇವಸ್ಥಾನದ ಸಿಸಿಟಿವಿಯನ್ನ ಮುರಿದಿದ್ದು ಅಲ್ಲದೆ ದೇವಸ್ಥಾನದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣ ಸ್ಥಗಿತಗೊಳಿಸಿ ಕೃತಿಯಸೆಗಿದ್ದಾರೆ ಜೊತೆಗೆ ಸರಿಸುಮಾರು 25 ಸಾವಿರ ಹಣ ಕಳ್ಳತನವಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ.

ಘಟನಾ ಸ್ಥಳಕ್ಕೆ ಹೊಸನಗರ ಪೊಲೀಸ್ ವೃತ್ತನಿರೀಕ್ಷಕರಾದ ಗೌಡಪ್ಪ ಗೌಡ ಹಾಗೂ ಹೊಸನಗರ ಪೊಲೀಸ್ ಠಾಣೆ, ಸಬ್ ಇನ್ಸ್ಪೆಕ್ಟರ್ ಶಂಕರ್ ಗೌಡ ಪಾಟೀಲ್ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದ್ದು ಬಳಿಕ ಬೆರಳಚ್ಚು ತಜ್ಞರ ತಂಡ ಸಹ ಬೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದಾರೆ.


ದೇವಸ್ಥಾನ ಸಮಿತಿಯ ದೂರಿನನ್ವಯ ಪ್ರಕರಣವನ್ನ ದಾಖಲಿಸಲಾಗಿದ್ದು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PRASARANANEWS...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading