ANNIVERSARY:ಸಮಾಜದ ಏಳಿಗೆಗೆ ಪ್ರತಿಯೊಬ್ಬ ಸಮಾಜ ಬಾಂಧವರು ಶ್ರಮಿಸಬೇಕು: ಗೋಪಾಲಕೃಷ್ಣ ಬೇಳೂರು…

ಹೊಸನಗರ: ಒಂದು ಸಮಾಜ ಏಳಿಗೆಯನ್ನು ಕಾಣಬೇಕಾದರೆ ಆ ಸಮಾಜದ ಪ್ರತಿಯೊಬ್ಬರೂ ಅದರ ಏಳಿಗೆಗೆ ಶ್ರಮಿಸಬೇಕು ಆಗ ಮಾತ್ರ ಸಮಾಜ ಏಳಿಗೆಯನ್ನು ಕಾಣಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಬಟ್ಟೆ ಮಲ್ಲಪ್ಪ ಧೀರ ದೀವರ ಸಂಘದ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ದೀರ ದೀವರ ಸಮಾಜಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಸ್ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪನವರ ಕೊಡುಗೆ ಅಪಾರವಾದದ್ದು ಅವರಿಬ್ಬರೂ ಸಮಾಜದ ಎರಡು ಕಣ್ಣುಗಳಿದ್ದಂತೆ ಅವರಂತೆ ಬಹಳಷ್ಟು ಹಿರಿಯರು ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಅವರೆಲ್ಲರ ಆದರ್ಶ ದಂತೆ ನಾವುಗಳು ಸಮಾಜದ ಏಳಿಗೆಗಾಗಿ ದುಡಿಯಬೇಕು ಜೊತೆಗೆ ಶಿಕ್ಷಣ ವಂಚಿತ ಬಡತನದಲ್ಲಿರುವ ಇನ್ನಿತರ ಸಮಸ್ಯೆಗಳಿಗೆ ಒಳಗಾಗಿರುವ ಸಮಾಜ ಬಾಂಧವರಿಗೆ ಸಹಾಯವನ್ನು ಮಾಡುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಂಡರೆ ಸಮಾಜದ ಅಭಿವೃದ್ಧಿಯಲ್ಲಿ ಇದು ಕೂಡ ಪಾತ್ರವಹಿಸಲಿದೆ.
ಹಾಗೆ ನಮ್ಮ ಸಮಾಜದೊಂದಿಗೆ ಬೇರೆ ಎಲ್ಲ ಸಮಾಜ ಹಾಗೂ ಸಮುದಾಯವನ್ನು ಗೌರವಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಹಾಗು ಸರ್ಕಾರದಿಂದ ಸಮಾಜದ ಏಳಿಗೆಗೆ ಬೇಕಾಗುವಂತ ಎಲ್ಲಾ ಸಹಕಾರವನ್ನು ಪಡೆಯಲು ನಾವೆಲ್ಲರೂ ಪಕ್ಷವನ್ನು ಮೀರಿ ಶ್ರಮಿಸಬೇಕು ನಮ್ಮ ಸಮುದಾಯಕ್ಕೆ ನಿಗಮ ಮಂಡಳಿ ಘೋಷಣೆಯಾಗಿ ಆ ಮೂಲಕ ಸರ್ಕಾರದಿಂದ ಒಂದಿಷ್ಟು ಅನುದಾನವನ್ನ ಪಡೆಯುವ ಕೆಲಸ ನಾವೆಲ್ಲರೂ ಸೇರಿ ಮಾಡೋಣ ಈ ಕುರಿತಾಗಿ ಮುಖ್ಯಮಂತ್ರಿಗಳ ಜೊತೆಗೆ ನಾನು ಸಹ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಈ ಕುರಿತಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.ಇದೆ ಸಂದರ್ಭದಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಮಾಜಿ ಶಾಸಕ ಬಿ ಸ್ವಾಮಿರಾಮ್ ಮತ್ತು ಜಿಡಿ ನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ನಿಟ್ಟೂರು ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮಿಜಿ
, ಸಾರಗನಜಡ್ಡು ಶ್ರೀ ಕ್ಷೇತ್ರ ಕಾರ್ತೀಕೇಯ ಪೀಠಾಧ್ಯಕ್ಷ ಯೋಗೇಂದ್ರ ಅವದೂತರು ಹಾಗು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಧೀರ ದೀವರ ಸಂಘದ ಅಧಯಕ್ಷರಾದ ಗಣಪತಿ ಮಾಕನಕಟ್ಟೆ ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ.ಜಿ.ಡಿ. ನಾರಾಯಣಪ್ಪ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಇತಿಹಾಸ ಸಂಶೋಧಕ ಮಧು ಗೋವಿಂದ ರಾವ್, ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಖ್ಯಾತ ವಕೀಲ ಡಿ.ಎನ್.ಹಿರಿಯಪ್ಪ, ಸಮಾಜದ ಹಿರಿಯ ಮುಖಂಡ ಹಿರಿಯಪ್ಪ ಹುಡ್ಲುಕೇವಿ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು. ಉಪಸ್ಥಿತರಿರುವರು...

ANNIVERSARY...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe