RAMACHANDRA PURA MATA:ಬಂಧ ಮುಕ್ತ ಗೋಶಾಲೆ ಸಾಕಾರಗೊಳ್ಳಬೇಕು : ರಾಘವೇಶ್ವರ ಶ್ರೀ

ಹೊಸನಗರ: ಗೋವು ಶಬ್ದಕ್ಕೆ ಚಲನಶೀಲ ಎನ್ನುವ ಅರ್ಥವಿದೆ ಹಾಗಾಗಿ ಗೋವುಗಳನ್ನು ಸದಾ ಕಟ್ಟಿಡುವುದು ಸಲ್ಲ ಈ ಹಿನ್ನೆಲೆಯಲ್ಲಿಯೇ ರಾಮಚಂದ್ರಾಪುರಮಠದ ಮಹಾನಂದಿ ಗೋಶಾಲೆ ಬಂಧಮುಕ್ತ ಗೋಶಾಲೆಯ ಕಲ್ಪನೆಯನ್ನು ಸಕಾರಗೊಳ್ಳುತ್ತಿದೆ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀಸ್ವಾಮೀಜಿ ಹೇಳಿದರು.
ರಾಮಚಂದ್ರಾಪುರ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ  ನಡೆದ ಕೃಷ್ಣಾರ್ಪಣಮ್ ವಾರ್ಷಿಕ ಕರ‍್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ನಂತರ ಅವರು ಆಶೀರ್ವನ ನೀಡಿದರು.
ಕೊನೆಯ ಪಕ್ಷ ಸೂರ್ಯೊದಯದಿಂದ ಸರ‍್ಯ ಅಸ್ತದವರೆಗಾದರೂ ಗೋವುಗಳನ್ನು ಹೊರ ಬಿಡಬೇಕು ಎನ್ನುವುದು ಶಾಸ್ತç. ಅದು ಕೇವಲ ಶಾಸ್ತç ಮಾತ್ರವಲ್ಲ ವೈಜ್ಞಾನಿಕವಾದ ಸತ್ಯವೂ ಹೌದು ಎಂದರು.
ಇದಕ್ಕೂ ಮುನ್ನ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ವು ಸ್ಥಾಪಕ ಅಧ್ಯಕ್ಷ ವಿದ್ಯಾವಾಚಸ್ಪತಿ ಅರಳುಮಲ್ಲಿಗೆಪಾರ್ಥಸಾರಥಿಯವರು ವಿಷ್ಣು ಸಹಸ್ರನಾಮದ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಸಹಸ್ರಾಧಿಕ ಭಕ್ತರಿಂದ ವಿಷ್ಣು ಸಹಸ್ರನಾಮ ಪಾರಾಯಣ ಸಮರ್ಪಣೆ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ, ಬಂಧಮುಕ್ತ ಗೋಶಾಲೆಯ ಲೋಕಾರ್ಪಣೆ, ವಿಷ್ಣು ಸಹಸ್ರನಾಮ ಲೇಖನ ಯಜ್ಞದ ದೀಕ್ಷೆ ಮತ್ತು ಪುಸ್ತಕದ ಸಮರ್ಪಣೆ, ಗೋಪಾಲಕರಿಗೆ ಆಶೀರ್ವದ ಕರ‍್ಯಕ್ರಮಗಳು ಸಂಪನ್ನಗೊAಡವರು. ಮಹಾನಂದಿ ಗೋಲೋಕದ ಕೆ.ಪಿ.ಎಡಪಾಡಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಮಧ್ಯಸ್ಥ ನಿರೂಪಿಸಿದರು.

RAMACHANDRA PURA MATA.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading