
ಹೊಸನಗರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿಗಳು ಕಬ್ಬಡಿ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಅವರ ಈ ಸಾಧನೆಯನ್ನ ಗುರುತಿಸಿ ಪಟ್ಟಣದ ಪ್ರತಿಷ್ಠಿತ ಸುಪ್ರದೀಪ ಎಲೆಕ್ಟ್ರಿಕ್ ನ ಮಾಲೀಕರಾದ ನವೀನ್ ಸಮವಸ್ತ್ರ ಹಾಗೂ ಶೂ ಗಳನ್ನ ಕೊಡುಗೆಯಾಗಿ ನೀಡಿ ಕ್ರೀಡಾಪಟುಗಳಿಗೆ ಶುಭವನ್ನ ಹಾರೈಸಿದ್ದಾರೆ.
ಸರ್ಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ತಮ್ಮ ಉದಾರತೆಯಿಂದ ಸಹಕಾರವನ್ನು ನೀಡುತ್ತಿರುವ ನವೀನ್ ಅವರನ್ನು ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಗೌರವಿಸಿತು ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಎಂಪಿ ಸುರೇಶ್, ಗೋಪಿನಾಥ್, ಉದಯ್ ಗೌಡ, ಶೇಖರ್, ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ನಾಯ್ಕ್ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
SPORTS UNIFORM...
Discover more from Prasarana news
Subscribe to get the latest posts sent to your email.
