
ಹೊಸನಗರ: ಪಟ್ಟಣದ ದ್ಯಾವರ್ಸ ವಾಸಿ ಮೊಹಮ್ಮದ್ ಆರಿಫ್ ಹಾಗೂ ಮಿನಜ್ ದಂಪತಿಗಳ ಪುತ್ರ ಮೊಹಮ್ಮದ್ ಅರ್ಮಾನ್ ಎಂಬ 11 ವರ್ಷದ ಬಾಲಕ
ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಕಾಲು ಮೂಳೆ ಮುರಿತಕ್ಕೆ ಒಳಗಾಗಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಈತನ ಕುಟುಂಬ ಚಿಕಿತ್ಸಾ ವೆಚ್ಚ ಹೋರೆಯಾಗಿದ್ದು ಕುಟುಂಬ ಉದಾರಿ ದಾನಿಗಳಿಂದ ಆರ್ಥಿಕ ಸಹಾಯಕ್ಕಾಗಿ ಕಣ್ಣೀರಿನ ಮೊರೆ ಇಟ್ಟಿದೆ.

ಘಟನೆಯ ವಿವರ:
ಕೆಲ ದಿನಗಳ ಹಿಂದೆ ಪಟ್ಟಣದ ಕನಕರಾಜ ಸರ್ಕಲ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಬಾಲಕನ ಕಾಲಿನ ಮೂಳೆ ಸಂಪೂರ್ಣವಾಗಿ ಮುರಿದುಹೋಗಿದೆ. ಅಪಘಾತ ಸಂಭವಿಸಿದ ತಕ್ಷಣ ಬಾಲಕನನ್ನು ತುರ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕನ ಮತ್ತೆ ನಡದಾಡುವಂತೆ ಮಾಡಲು ಈಗಾಗಲೇ ₹1,80,000 (ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ) ಚಿಕಿತ್ಸಾ ವೆಚ್ಚವಾಗಿದೆ.

ಬಾಲಕನ ಪೋಷಕರು ಅತ್ಯಂತ ಬಡತನದ ಹಿನ್ನೆಲೆಯುಳ್ಳವರಾಗಿದ್ದು, ದಿನಗೂಲಿ ನಂಬಿ ಜೀವನ ಸಾಗಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈಗಾಗಲೇ ಕೈಲಿದ್ದ ಹಣ ಹಾಗೂ ಸಾಲಸೋಲ ಮಾಡಿ ₹1.80 ಲಕ್ಷ ಆಸ್ಪತ್ರೆಗೆ ಪಾವತಿಸಿದ್ದಾರೆ. ಆದರೆ ಮುಂದಿನ ವೈದ್ಯಕೀಯ ಚಿಕಿತ್ಸೆ, ಔಷಧಿ ಹಾಗೂ ಆಸ್ಪತ್ರೆಯ ಇತರ ವೆಚ್ಚಗಳನ್ನು ಭರಿಸಲು ಪೋಷಕರ ಬಳಿ ನಯಾಪೈಸೆ ಹಣವಿಲ್ಲದಂತಾಗಿದೆ. ಮಗನ ನೋವನ್ನು ನೋಡಲಾಗದೆ, ಚಿಕಿತ್ಸೆ ಮುಂದುವರಿಸಲು ಹಣವೂ ಇಲ್ಲದೆ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಉದಾರಿ ದಾನಿಗಳು ಹಾಗೂ ಸಾರ್ವಜನಿಕರು ಶಕ್ತಿ ಮೀರಿ ನಮಗೆ ಆರ್ಥಿಕ ಸಹಾಯ ಮಾಡುವಂತೆ ಬಾಲಕನ ಪೋಷಕರು ಅತ್ಯಂತ ವಿನಮ್ರತೆಯಿಂದ ಮನವಿಯನ್ನ ಮಾಡಿದ್ದಾರೆ.
ನೆರವು ನೀಡಲು ಇಚ್ಛಿಸುವ ದಾನಿಗಳು ಕೆಳಗಿನ ಬ್ಯಾಂಕ್ ಖಾತೆ ಅಥವಾ ದೂರವಾಣಿ ಸಂಖ್ಯೆಗೆ ನೇರವಾಗಿ ಹಣವನ್ನು ಕಳುಹಿಸಿಕೊಡಬಹುದು.

ಹೆಸರು: ಮಿನಾಜ್ ಬಾನು
ಅಕೌಂಟ್ ನಂಬರ್:337822010000679
ಐಎಫ್ಎಸ್‌ಸಿ: UBIN0933783
ಯೂನಿಯನ್ ಬ್ಯಾಂಕ್
ಹೊಸನಗರ ಬ್ರಾಚ್ .
ಫೋನ್ ಪೇ ನಂಬರ್:9606235807
MEENAZ BANU.
ACCIDENT..
Discover more from Prasarana news
Subscribe to get the latest posts sent to your email.
