Flash News

DASARA:ದಸರಾ ಸಂಭ್ರಮಕ್ಕೆ ಸಾರಥ್ಯ: ಆಚರಣೆ ಸಮಿತಿ ಅಧ್ಯಕ್ಷರಾಗಿ ಎನ್. ಚಂದ್ರಶೇಖರ್ ಶೇಟ್ ಆಯ್ಕೆ.

ಹೊಸನಗರ: ಈ ಬಾರಿಯ ಹೊಸನಗರ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾಗಿ ಏನ್ ಚಂದ್ರಶೇಖರ್ ಶೇಟ್  ಆಯ್ಕೆಯಾಗಿದ್ದು ಕಾರ್ಯದರ್ಶಿಯಾಗಿ ಸುಧೀಂದ್ರ ಪಂಡಿತ್ ಅವರನ್ನು ಅಯ್ಕೆ ಮಾಡಲಾಗಿದೆ.
ಗುರುವಾರ ತಾಲೂಕು ತಹಶೀಲ್ದಾರ್ ಭರತ್ ರಾಜ್  ಅಧ್ಯಕ್ಷತೆಯಲ್ಲಿ ಹೊಸನಗರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 2026-27ನೇ ಸಾಲಿನ ದಸರಾ ಪೂರ್ವಭಾವಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.
ಅಲ್ಲದೆ ಸಮಿತಿಯ ಸಹ ಕಾರ್ಯದರ್ಶಿಯಾಗಿ ಭೋಜಪ್ಪ ಗೌಡ ಖಜಾಂಚಿಯಾಗಿ ಚಿರಾಗ್ ಅವರನ್ನ ಆಯ್ಕೆ ಮಾಡಲಾಯಿತು ಬಳಿಕ ವಿವಿಧ ಸಮಿತಿಗಳಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾ ಆಯ್ಕೆಗು ಮುನ್ನ  ನಿಕಟ ಪೂರ್ವ ಅಧ್ಯಕ್ಷ ವಿನಯ್ ಕುಮಾರ್ ಧುಮ್ಮ ಹಿಂದಿನ ಸಾಲಿನ ಲೆಕ್ಕ ಪತ್ರವನ್ನ ಸಭೆಯ ಮುಂದೆ ಸಲ್ಲಿಸಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹರೀಶ್ ಎಂ ಎನ್, ಮಂಜು ಸಣ್ಣಕ್ಕಿ, ಸ್ವಾಮಿ,  ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ಮುರುಳಿಧರ್, ರಾಧಿಕಾ ರತ್ನಾಕರ್ ಶೆಟ್ಟಿ, ಸಂತೋಷ್ ಶೇಟ್, ವಿಠಲ್ ರಾವ್, ನೋರಾ, ಮುಂತಾದವರು ಉಪಸ್ಥಿತರಿದ್ದರು..

DASARA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading