
ಹೊಸನಗರ:ಸಾರ್ವಜನಿಕ ಶ್ರೀಗಣೇಶೋತ್ಸವ
ಅಖಿಲ ಭಾರತ ಹಿಂದು ಮಹಾಸಭಾ
ಹೊಸನಗರ ಘಟಕದ ವತಿಯಿಂದ ಆಚರಿಸಿದ ಶ್ರೀಪರಾಭವ ಸಂವತ್ಸರ 2026 ಎಂಟನೇ ವರ್ಷದ ಅದ್ಧೂರಿ ಶ್ರೀಗಣೇಶೋತ್ಸವದ ಅದ್ಧೂರಿ ಸಮಾರಂಭಕ್ಕೆ ಸಹಕರಿಸಿದ ಸಮಸ್ತ ಹಿಂದು ಸಮಾಜಕ್ಕೆ ಕಾರ್ಯಸಂಚಾಲಕ್ ಅನೂಪ್ ಅರವಿಂದ್ ಧನ್ಯವಾದ ಸಲ್ಲಿಸಿದ್ದಾರೆ.
ಬುಧವಾರ ಸಾವರ್ಕರ್ ಮಂಟಪದಲ್ಲಿ ಆಯೋಜಿಸಲಾಗಿದೆ ಅವಲೋಕನ ಬೈಠಕ್ ಉದ್ದೇಶಿಸಿ ಅವರು ಮಾತಾನಾಡಿದರು.ಪ್ರತಿಷ್ಠಾಪನಾ ಯಾತ್ರೆಯಿಂದ ಹಿಡಿದು ವೀರ ಸಾವರ್ಕರ್ ಮಂಟಪದೊಳಗಿನ ಪ್ರಧಾನ ವೇದಿಕೆ ವೀರಸನ್ಯಾಸಿ ವಿವೇಕಾನಂದದಲ್ಲಿ ನಡೆದ ಭಜನೆಗಳು, ಗಮಕ, ಭರತನಾಟ್ಯಗಳು, ಚಿಣ್ಣರ ನೃತ್ಯ ಮತ್ತು ಯಕ್ಷಗಾನಗಳು ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೆಚ್ಚಿಸಿದವು ಎಂದು ತಿಳಿಸಿದರು.ಹಿಂದು ದಿಗ್ವಿಜಯ ಯಾತ್ರೆಯಲ್ಲಿ ಪಾಲ್ಗೊಂಡ ಸಮಸ್ತ ಯುವ ಶಕ್ತಿ, ಮಾತೃ ಶಕ್ತಿ, ಸಜ್ಜನ ಶಕ್ತಿ, ಸುಪ್ತ ಶಕ್ತಿ ಮತ್ತು ಉತ್ಸುಕ ಶಕ್ತಿಗಳನ್ನು ಮತ್ತು ವಿವಿಧ ಕಲಾತಂಡಗಳನ್ನು ಕೂಡ ಸ್ಮರಿಸಿಕೊಂಡರು.ವಿವಿಧ ಸ್ಪರ್ಧೆಗಳ ಯಶಸ್ಸು ನಮಗೆ ಇನ್ನಷ್ಟು ಪ್ರೇರಣೆ ನೀಡಿದವು ಎಂದು ನುಡಿದರು.
ಗೌರವ ಸಂಚಾಲಕರಾದ ಕೆ ಎಸ್ ವಿನಾಯಕ ಶ್ರೇಷ್ಠಿ ಅವರು ಮಾತಾನಾಡಿ ಈ ಯಶಸ್ಸಿಗೆ ಕಾರಣರಾದ ಪ್ರತಿ ದಾನಿ ಮಹಾದಾನಿಗಳನ್ನು ಸ್ಮರಿಸಿದರು.ವಿಶೇಷವಾಗಿ ರಕ್ಷಣಾ ಇಲಾಖೆ, ವಿದ್ಯುತ್ ಇಲಾಖೆ, ಕಂದಾಯ ಇಲಾಖೆ, ಪಟ್ಟಣ ಪಂಚಾಯತ್, ಪತ್ರಿಕಾ ಪ್ರತಿನಿಧಿ ಬಂಧುಗಳು, ವಿವಿಧ ಸಾರ್ವಜನಿಕ ಶ್ರೀಗಣೇಶೋತ್ಸವ ಮಂಡಳಿಗಳು,ಸಮಿತಿಯ ಸದಸ್ಯರು ಮತ್ತು ಕಾರ್ಯಕರ್ತರನ್ನು, ಪ್ರತ್ಯಕ್ಷ-ಅಪ್ರತ್ಯಕ್ಷವಾಗಿ ಸಹಕರಿಸಿದ ಮಹಾಜನತೆಯನ್ನು ಸ್ಮರಿಸಿಕೊಂಡರು.
ಈ ಬೈಠಕ್ ನಲ್ಲಿ ಪ್ರಧಾನ ಸಂಚಾಲಕರಾದ ಗಣೇಶ್ ಮಧುಕರ್, ಪ್ರಧಾನ ಕೋಶಾಧಿಕಾರಿ ನಾಗರಾಜ್, ಸಾಂಸ್ಕೃತಿಕ ಸಂಚಾಲಕ ಮಂಜುನಾಥ್ ಪೂಜಾರಿ ಸಹಿತ ಸುರೇಂದ್ರ ಕೋಟ್ಯಾನ್,ನಂದಿ ಸಂತೋಷ್, ಸುಧೀಂದ್ರ ಪಂಡಿತ್, ಕೆ ವಿನಯ್ ಕುಮಾರ್ , ಶಿವಕುಮಾರ್,ಕಾವ್ಯ ಕಾರಣಗಿರಿ, ಮಂಜು ಸಂಜೀವ್,ಕಾರ್ತಿಕ್, ನಿಶ್ಚಿತ್ ಸಹಿತ ಕಾರ್ಯಕರ್ತರು ಸದಸ್ಯರು ಉಪಸ್ತಿತರಿದ್ದರು..
H M S.
Discover more from Prasarana news
Subscribe to get the latest posts sent to your email.
