
ಹೊಸನಗರ: ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಹಿತಾಸಕ್ತಿ ಇದ್ದಾಗ ಮಾತ್ರ ಅವರು ಪ್ರತಿನಿಧಿಸುವ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರೀನಗೊಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡವ ಉದ್ದೇಶದಿಂದ ಸರ್ಕಾರ ಈ ಒಂದು ಉತ್ತಮ ಯೋಜನೆಯನ್ನು ಆರಂಭಿಸಿದ್ದು ಆಯುಷ್ಮಾನ್ ಆರೋಗ್ಯ ಮಂದಿರಗಳು ಗ್ರಾಮೀಣ ಭಾಗದ ಜನರಿಗೆ ಉಚಿತ ತಪಾಸಣೆ, ಅಗತ್ಯ ಔಷಧಿಗಳು ಮತ್ತು ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತದೆ ಎಂದರು. ಸುಮಾರು 65 ಲಕ್ಷ ಅನುದಾನದಲ್ಲಿ ವ್ಯವಸ್ಥಿತವಾಗಿ ಈ ಕಟ್ಟಡ ನಿರ್ಮಾಣವಾಗಲಿದ್ದು ಶೀಘ್ರ ಸಾರ್ವಜನಿಕರ ಅರೋಗ್ಯ ಸೇವೆಗೆ ನೀಡಲಾಗುವುದು ಎಂದರು.
ಹೊಸನಗರ ತಾಲೂಕಿನಲ್ಲಿ ಈಗಾಗಲೇ ವೈದ್ಯಕೀಯ ಸೇವೆಗಳಿಗೆ ಹೆಚ್ಚು ಒತ್ತನು ನೀಡಿದ್ದು ಈಗಾಗಲೇ ಹೊಸನಗರ ಸಾರ್ವಜನಿಕ ಆಸ್ಪತ್ರೆ ಗೆ ಸುಸರ್ಜಿತ ಲ್ಯಾಬ್ ಮೇಲ್ಚಾವಣಿ ವೈದ್ಯರ ನೇಮಕ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದ್ದು ಅದರಂತೆ ಈ ಭಾಗದ ಜನರ ಬೇಡಿಕೆಯಂತೆ ಆಯುಷ್ಮನ್ ಆರೋಗ್ಯ ಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಜೊತೆಗೆ ಈಗಾಗಲೇ ನನ್ನ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿಪಡಿಸಿದ್ದು ಇನ್ನು ಉಳಿದ ಅಧಿಕಾರ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿದೆ ಎಂದು ತಿಳಿಸಿದರು.ಅಲ್ಲದೆ ಹೊಸನಗರ ತಾಲೂಕಿನಾದ್ಯಂತ ರಸ್ತೆಗಳ ನೂತನ ಕಟ್ಟಡಗಳು ನಿರ್ಮಾಣ, ಕಾಲು ಸಂಕ, ಸೇರಿ ಬಹಳಷ್ಟು ಅನುದಾನವನ್ನ ಈಗಾಗಲೇ ಬಿಡುಗಡೆಗೊಳಿಸಿದ್ದು ಶೀಘ್ರದಲ್ಲಿ ಬಹಳಷ್ಟು ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಹಾಗೆಯೇ ಜನಪ್ರತಿನಿಧಿಗಳಿಗೆ ಸಾರ್ವಜನಿಕ ಹಿತಾಸಕ್ತಿ ಇದ್ದಾಗ ಮಾತ್ರ ಇಂತಹ ಅಭಿವೃದ್ಧಿ ಕಾರ್ಯಗಳು ಮಾಡಲು ಸಾಧ್ಯ ಈ ನಿಟ್ಟಿನಲ್ಲಿ ನಾನು ಸಾರ್ವಜನಿಕರ ಬೇಡಿಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರಮೌಳಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನ ಕೋಣೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್ ಮುಖಂಡರಾದ ಸ್ವಾಮಿ, ಸತೀಶ್,ಮಹೇಂದ್ರ,ಪ್ರವೀಣ್ ಜಿ ಏನ್,ಅಣ್ಣಪ್ಪ,ಪ್ರವೀಣ್ ಬೃಂದಾವನ,ಬಾಬಣ್ಣ,ಮುಂತಾದವರು ಉಪಸ್ಥಿತರಿದ್ದರು.
AYUSHMAN..
Discover more from Prasarana news
Subscribe to get the latest posts sent to your email.
