
ಹೊಸನಗರ: ಪಟ್ಟಣದ ಅಖಿಲ ಭಾರತ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಶೋಭಾಯಾತ್ರೆ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ನೆರವೇರಿತು.

ಪಟ್ಟಣದ ಅಂಚೆ ಕಚೇರಿ ಸಮೀಪದ ವೀರ ಸಾವರ್ಕರ್ ಮಂಟಪದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ ಘಟಕದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 8ನೇ ವರ್ಷದ ಗಣೇಶಮೂರ್ತಿ ಸೋಮವಾರ ಸಂಜೆ ವಿಶೇಷ ಪೂಜೆಯೊಂದಿಗೆ ಆರಂಭವಾದ ಶೋಭಾಯಾತ್ರೆ, ದ್ಯಾವರ್ಸ, ನೆಹರು ರಸ್ತೆ, ಕೋರ್ಟ್ ಸರ್ಕಲ್, ಚೌಡಮ್ಮ ರಸ್ತೆ ಕಾಳಿಕಾಪುರ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿತು.

ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡೆ ವಿವಿಧ ಬಗೆ ಗೊಂಬೆಗಳು ಆಕರ್ಷಕ ಸ್ಥಬ್ಧಮೂರ್ತಿ ಪ್ರದರ್ಶನವಿತ್ತು. ಇಡೀ ಹೊಸನಗರ ಪಟ್ಟಣವು ಕೇಸರಿ ಧ್ವಜಗಳಿಂದ ರಾರಾಜಿಸುತ್ತಿದ್ದು, ಯುವಕರು ಮತ್ತು ಮಹಿಳೆಯರು ಡಿಜೆ ಹಾಗೂ ಮಂಗಳ ವಾದ್ಯಗಳೊಂದಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದ್ದು ವಿಸರ್ಜನ ಶೋಭ ಯಾತ್ರೆಗೆ ಇನ್ನಷ್ಟು ಮೆರಗನ್ನ ನೀಡಿತ್ತು .

ಸತತ ಹದಿನಾಲ್ಕು ಗಂಟೆಗಳ ಕಾಲ ರಾತ್ರಿಯಿಡೀ ಸಾಗಿದ ಮೆರವಣಿಗೆಯು ಮಂಗಳವಾರ ಮುಂಜಾನೆ ಗಣಪತಿ ದೇವಸ್ಥಾನದ ಪುಷ್ಕರಣೆ ತಲುಪಿತು.

ಧಾರ್ಮಿಕ ವಿಧಿವಿಧಾನಗಳ ಬಳಿಕ ಭಕ್ತರ ಜಯಘೋಷಗಳೊಂದಿಗೆ ಮಹಾಗಣಪತಿ ಮೂರ್ತಿಯನ್ನು ಪುಷ್ಕರಣಿಯಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

ಸಾವಿರಾರು ಭಕ್ತರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆಯಲ್ಲಿ ಭಕ್ತಿ ಪೂರ್ವಕವಾಗಿ ಸಂಪನ್ನಗೊಂಡಿತು.
H M S..
Discover more from Prasarana news
Subscribe to get the latest posts sent to your email.
