
ಬಟ್ಟೆಮಲ್ಲಪ್ಪ: ತಾಲೂಕಿನ ಬಟ್ಟೆ ಮಲ್ಲಪ್ಪ ದಲ್ಲಿರುವ ಸಾರ ಸಂಸ್ಥೆ ಆಶಯದಲ್ಲಿ ಆಯೋಜಿಸಲಾಗಿದೆ ಪರಿಸರ ಬಹುಮುಖಿ ನೋಟ ಕಾರ್ಯಕ್ರಮವನ್ನು ಪರಿಸರ ಚಿಂತಕ ಕುರುವರಿಯವರು ಗಾಂಧೀಜಿ ಬಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ, ಗಿಡಕ್ಕೆ ನೀರನ್ನು ಎರೆಯುವದರ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ನುಡಿಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಬದುಕು ಮುಖ್ಯ, ಆ ಬದುಕು ಚೆನ್ನಾಗಿರಬೇಕಾದರೆ ನಮ್ಮ ಸುತ್ತಲಿನ ನಿಸರ್ಗ, ಆಹಾರ, ವಾತಾವರಣ ಚೆನ್ನಾಗಿರಬೇಕು. ನಾವು ನಮ್ಮ ಕೃಷಿ ಬದುಕಿನಲ್ಲಿನ ಕೆಲಸ ಜೊತೆಗಿನ ಸರಳತೆ, ಸಂಸ್ಕೃತಿ, ಜನಪದವನ್ನು ಸಂಭ್ರಮಿಸುತ್ತೇನೆ ಮತ್ತು ಬಹಳ ಮುಖ್ಯ. ಅದರ ಜೊತೆಗೆ ಬದುಕು ಮತ್ತೊಬ್ಬರ ಹೇರಿಕೆಯೂ ಆಗಬಾರದು ಎಂದರು.
ಪ್ರಾಸ್ತಾವಿಕವಾಗಿ ಶಿಬಿರದ ನಿರ್ದೇಶಕರಾದ ರತ್ನಾಕರ ಸಿ ಕುನಗೋಡು ಇವರು, ಶಿಬಿರವು ಕಳೆದ ಮೂರು ವರ್ಷಗಳಿಂದ ನಮ್ಮ ಸುತ್ತಲಿನ ವಿದ್ಯಾರ್ಥಿಗಳಿಗೆ ಮಾತ್ರ ಮಾಡಲಾಗುತ್ತಿತ್ತು, ಆದರೆ ಇಂದು ಶಿವಮೊಗ್ಗ ಮೈಸೂರಿನಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಇಲ್ಲಿ ಪರಿಸರ ಕೃಷಿಯ ಸಾಧ್ಯತೆಗಳೊಂದಿಗೆ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಈ ಶಿಬಿರವು ಹಲವು ಚಿಂತನೆಗಳಿಗೆ ಕಾರಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರದ ಗಿರೀಶ್ ಜನ್ನೆ,ವಸಂತ ಕುಮಾರ್,ಕಾರ್ಯಕ್ರಮದ ನಿರ್ವಹಣೆ ಧನುಷ್ ಕುಮಾರ್, ಪ್ರಾರ್ಥನೆ ವಿನಯ ನಡೆಸಿಕೊಟ್ಟರೂ ಸಾರ ಸಂಸ್ಥೆಯು ಕುಮಾರ್, ಶಿವಕುಮಾರ್, ಆದರ್ಶ,ಸಿಂಚನ ಜೊತೆಗಿದ್ದರು.
SARA.
Discover more from Prasarana news
Subscribe to get the latest posts sent to your email.
