KGFGC:ಮಾಡುವ ಕೆಲಸದಲ್ಲಿ ತೃಪ್ತಿ ಕಾಣಬೇಕೇ ಹೊರತೂ ಅದರ ಪ್ರತಿಫಲದಲ್ಲಿ ಅಲ್ಲ.

ಹೊಸನಗರ:ಕರ್ಮಣ್ಯೇ ವಾಧಿಕಾರಸ್ತ್ಯೇ ಮಾ ಫಲೇಷು ಕದಾಚನ ಎಂಬ ಭಗವದ್ಗೀತೆಯ ಸಂದೇಶವನ್ನು ಗಾಂಧೀಜಿಯವರು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬಂದವರು. ಮಾಡುವ ಕೆಲಸದಲ್ಲಿ ತೃಪ್ತಿ ಕಾಣಬೇಕೇ ಹೊರತೂ ಅದರ ಪ್ರತಿಫಲದಲ್ಲಿ ಅಲ್ಲ" ಎಂದು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ರಾಜುರವರು ನುಡಿದರು. ಕೊಡಚಾದ್ರಿ ಕಾಲೇಜಿನಲ್ಲಿ ನಡೆದ ಗಾಂಧೀ ಜಯಂತಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,  ಗಾಂಧೀ ಎಂಬುದು ಒಂದು ವ್ಯಕ್ತಿಯಷ್ಟೇ ಅಲ್ಲ, ಅದೊಂದು ವಿಚಾರ. ಅದೊಂದು ಸಿದ್ಧಾಂತ. ಅವರ ಬದುಕೇ ಒಂದು ಸಂದೇಶ ಎಂದು ಅವರು ಹೇಳಿದರು. ನಂತರ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪತಿ ಹಳಗುಂದ, ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಉಲ್ಲೇಖಿಸಿ, ಅವರ ಸರಳತೆಯನ್ನು ಪ್ರಶಂಸಿಸಿ ದೇಶಕ್ಕಾಗಿ ಮಡಿದವರು ನಮಗೆ ನಿತ್ಯದ  ಆದರ್ಶಗಳಾಗಬೇಕೇ ಹೊರತೂ ಕೇವಲ ಜಯಂತಿಗೆ ಮೀಸಲಾಗಬಾರದು, ಗಾಂಧಿ ಇವತ್ತಿನ ಪ್ರಪಂಚಕ್ಕೆ ಪ್ರಸ್ತುತವಾಗುತ್ತಾರೆ ಎಂದು ಹೇಳಿದರು. ನಾವೆಲ್ಲರೂ ಮೋಹಾತ್ಮರಾಗಿದ್ದೇವೆ, ಮಹಾತ್ಮರಾಗಲು  ಪ್ರಯತ್ನಿಸಬೇಕು. ಎಂದರು

ಪ್ರಪಂಚದಲ್ಲಿ ಒಂದಲ್ಲಾ ಒಂದು ಕಡೆ ಗಾಂಧಿಯವರನ್ನು ನೆನಪಿಸಿಕೊಳ್ಳಲಾಗುತ್ತಲೇ ಇರುತ್ತದೆ. ಬದುಕಿದ್ದ ಗಾಂಧಿಗಿಂತ ಮರಣ ಹೊಂದಿದ ನಂತರದ ಗಾಂಧಿಯವರೇ ಈಗ ಪ್ರಸ್ತುತವಾಗಿದ್ದಾರೆ ಎಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರೀ ದೊಡ್ಡಯ್ಯ ಹೆಚ್ ಅವರು ನುಡಿದರು.

ಕಾರ್ಯಕ್ರಮದಲ್ಲಿ  ಅಧ್ಯಕ್ಷತೆ ವಹಿಸಿದ ಕಾಲೇಜಿನ‌ ಪ್ರಾಂಶುಪಾಲರಾದ ಶ್ರೀಮತಿ ಶಾಲಿನಿ ಬಿ. ಎನ್ ರವರು ಮಾತನಾಡಿ ಗಾಂಧೀಜಿಯವರು ಕೊಟ್ಟ ಸತ್ಯ, ಅಹಿಂಸೆ, ಸರಳತೆ, ಸ್ವಚ್ಛತೆ ಮತ್ತು ಸಾಮಾಜಿಕ ಜವಾಬ್ದಾರಿ ಎಂಬುದು ಅನುಗಾಲದ‌ ಬದುಕಾಗಬೇಕು. ಇವೆಲ್ಲವೂ ನಮ್ಮಿಂದಲೇ ಆರಂಭವಾಗಿ ರಾಷ್ಟ್ರಮಟ್ಟದವರೆಗೂ ಕೊಂಡೊಯ್ಯಬೇಕು ಎಂದರು.


ಕಾಲೇಜಿನ ಎಲ್ಲ ಅಧ್ಯಾಪಕರು,  ಐಕ್ಯೂಏಸಿ ಸಂಚಾಲಕರಾದ  ಶ್ರೀ ಮಂಜುನಾಥ್ ಡಿ,
ರಾಸೇಯೋ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಮೇದಿನಿ ಕೆ.ಎಸ್, ರೇಂಜರ್ಸ್ ಲೀಡರ್ ಶ್ರೀಮತಿ ಸುಪ್ರಿಯಾ ಬಾಬಾ ನಾಯ್ಕ,  ಎನ್ ಎಸ್ ಎಸ್, ರೋವರ್ಸ್ ರೇಂಜರ್ಸ್,  ರೆಡ್ ಕ್ರಾಸ್ ಸ್ವಯಂ ಸೇವಕರು ಹಾಜರಿದ್ದು, ವೇದಿಕೆ ಕಾರ್ಯಕ್ರಮದ ನಂತರ ಕಾಲೇಜಿನ ಸುತ್ತಮುತ್ತ ಸ್ವಚ್ಛಗೊಳಿಸದರು .

KGFGC..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading