
ಹೊಸನಗರ:ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ವರದಿಗೆ ತೆರಳಿದ್ದ ಮೂವರು ಪತ್ರಕರ್ತೆಯರ ಮೇಲೆ ನಡೆದ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ಶಾಖೆ ತೀವ್ರವಾಗಿ ಖಂಡಿಸುತ್ತದೆ.
ವರದಿಗೆ ತರಳಿದ್ದ ಪತ್ರಕರ್ತೆಯರನ್ನು ಪೊಲೀಸ್ ಅಧಿಕಾರಿಯೊಬ್ಬರು ಅನುಚಿತವಾಗಿ ಎಳೆದಾಡಿ ಲೈಂಗಿಕ ಕಿರುಕುಳ ನೀಡಿರುವುದು ಅಕ್ಷಮ್ಯ ಆ ಅಧಿಕಾರಿಯ ವಿರುದ್ಧ ದೂರು ದಾಖಲಿಸಲು ಮಹಿಳಾ ಪತ್ರಕತೆ'ಯರು ಪೊಲೀಸ್ ರಾಣೆಗೆ ತೆರಳಿದಾಗ ಗಂಟೆಗಟ್ಟಲೆ ಕಾಯಿಸಿ ಎಫ್‌ಐಆರ್ ಹಾಕದೆ ಸತಾಯಿಸಿ ಆಕೆಯನ್ನು ವಶಕ್ಕೆ ಪಡೆದು ಕಾನೂನುಬಾಹಿರ ಕೃತ್ಯವಾಗಿದೆ. ಪತ್ರಕರ್ತೆಯರು ಆಧಿಕೃತ ಗುರುತುಪತ್ರವನ್ನು ಹೊಂದಿದ್ದರೂ ಅವರಿಗೆ ತೊಂದರೆ ಕೊಟ್ಟಿದ್ದಾರೆ. ಸ್ವತಂತ್ರ ಮಾಧ್ಯಮಗಳು, ಡಿಜಿಟಲ್ ಮಾಧ್ಯಮದ ಪತ್ರಕರ್ತರೊಂದಿಗೆ ಪೊಲೀಸ್ ಅಧಿಕಾರಿಗಳು ವರ್ತಿಸಿದ ರೀತಿ ಇಡೀ ಪತ್ರಿಕಾ ಸಮೂಹಕ್ಕೆ ಮಾಡಿದ ಅವಮಾನವಾಗಿದೆ.
ಹಿಂದೆ ನೀಟ್ ಪರೀಕ್ಷೆ ಸಂದರ್ಭದಲ್ಲಿ ಸಹ ಜಂತರ್ ಮಂರ್ತನಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಮಹಿಳಾ ಪತ್ರಕರ್ತೆಯರ ಮೇಲೆ ಪೊಲೀಸರು ಇದೇ ರೀತಿ ಹಲ್ಲೆ ನಡೆಸಿದ್ದರು. ವದೇಪದೇ ಇಂತಹ ಕೃತ್ಯ ನಡೆಯುತ್ತಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದೆ. ಇದಕ್ಕೆ ಕಡಿವಾಣ ಹಾಕುವ ಜೊತೆಗೆ ಮಾಧ್ಯಮದವರು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕಾಗಿದೆ. ಮಹಿಳಾ ಪತ್ರಕರ್ತೆಯರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ ಕಾನೂನುಕ್ರಮ ಜರುಗಿಸಬೇಕೆಂದು ತಾಲೂಕು ದಂಡಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನ ಸಲ್ಲಿಸಿದರು ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷರಾದ ರವಿ ನಾಗರಕೊಡಿಗೆ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಪಂಡಿತ್, ಕಾರ್ಯದರ್ಶಿ ಮನು ಸುರೇಶ್ ನಿರ್ದೇಶಕರಾದ ನರಸಿಂಹಮೂರ್ತಿ ಜಿಲ್ಲಾ ಸಮಿತಿ ನಿರ್ದೇಶಕರಾದ ರವಿ ಬಿದನೂರು, ಉಪಸ್ಥಿತರಿದ್ದರು.
KUWJ..
Discover more from Prasarana news
Subscribe to get the latest posts sent to your email.
