RAILWAY:ರೈಲ್ವೆ ಸಂಪರ್ಕ ಮಾರ್ಗ ನಿರ್ಮಾಣ ಡಿಪಿಆರ್‌ಗೆ ಹೊಸನಗರವನ್ನು ಸೇರಿಸಲು ಆಗ್ರಹ..

ಹೊಸನಗರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ ನಿರ್ಮಾಣದ ವಿಸ್ತೃತ ಯೋಜನಾ ವರದಿಯಲ್ಲಿ (DPR) ಹೊಸನಗರವನ್ನು ಕೈ ಬಿಡಲಾಗಿದ್ದು ಕೂಡಲೇ ರೈಲ್ವೆ ಸಂಪರ್ಕ ಯೋಜನೆಯ ಡಿಪಿಆರ್ ನಲ್ಲಿ ಹೊಸನಗರ ವನ್ನ ಸೇರಿಸುವಂತೆ ತಾಲೂಕು ವರ್ತಕರ ಸಂಘ ತಾಲೂಕು ತಹಶೀಲ್ದಾರ್ ಗೆ ಮನವಿ ಪತ್ರವನ್ನು ನೀಡುವ ಮೂಲಕ ಆಗ್ರಹಿಸಿದೆ.
ಈ ಕುರಿತಾಗಿ ಮಾತನಾಡಿದ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲ್
ಸುಮಾರು 3300 ಕೋಟಿ ರೂ. ವೆಚ್ಚದ ಈ ಯೋಜನೆಗೆ ಡಿಪಿಆರ್ ತಯಾರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. 2018ರಲ್ಲಿ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರು ನೀಡಿದ್ದ ಭರವಸೆಯಂತೆ ಹೊಸನಗರವನ್ನು ಈ ಯೋಜನೆಯಲ್ಲಿ ಸೇರಿಸಬೇಕು. ಆದರೆ ಪ್ರಸ್ತುತ ಅರಸಾಳು-ರಿಪ್ಪನ್‌ಪೇಟೆ-ತೀರ್ಥಹಳ್ಳಿ ಮೂಲಕ ಮಾರ್ಗ ನಿರ್ಮಿಸುವ ಚರ್ಚೆ ನಡೆಯುತ್ತಿದ್ದು, ಇದರಿಂದ ಹೊಸನಗರಕ್ಕೆ ಅನ್ಯಾಯವಾಗಲಿದೆ ಎಂದು ತಿಳಿಸಿದರು.ನಾಡಿನ ಜನತೆಗೆ ಬೆಳಕು ನೀಡಲು ಸರ್ವಸ್ವವನ್ನೂ ಕಳೆದುಕೊಂಡ ತ್ಯಾಗಮಯಿ ತಾಲೂಕು ಹೊಸನಗರ. ಈ ತ್ಯಾಗವನ್ನು ಮರೆತು ನಮ್ಮನ್ನು ಕಡೆಗಣಿಸುವ ಪ್ರಯತ್ನ ಸರಿಯಲ್ಲ  ಉದ್ದೇಶಿತ ರೈಲು ಮಾರ್ಗವು ಅರಸಾಳು, ರಿಪ್ಪನ್‌ಪೇಟೆ, ಹೊಸನಗರ, ತೀರ್ಥಹಳ್ಳಿ ಮೂಲಕವೇ ಹಾದುಹೋಗುವಂತೆ ಡಿಪಿಆರ್ ಸಿದ್ಧಪಡಿಸಿ, ದಶಕಗಳಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಈ ಕುರಿತಾಗಿ ಸಂಸದರಿಗೆ ಕೇಂದ್ರ ಸಚಿವರಿಗೆ ಮನವಿಯನ್ನು ಮಾಡಲಾಗುವುದು ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನ ಸಮಸ್ತ ಜನತೆ ಒಗ್ಗಟ್ಟಾಗಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ದೇವಾನಂದ್, ಹಾಲಗದ್ದೆ ಉಮೇಶ್, ಜಯರಾಮ್ ಶೆಟ್ರು
ವರ್ತಕರ ಸಂಘದ ಸುರೇಶ ಬಿಎಸ್, ಹರೀಶ್ ರಾವ್ ವಿಜೇಂದ್ರ ಶೇಟ್, ಭೋಜಪ್ಪ ಗೌಡ್ರು,ಸಂತೋಷ್ ಶೇಟ್, ವಿನಾಯಕ ಹೆದ್ಲಿ, ವಾದಿರಾಜ್,ಉದಯ್ ಕುಮಾರ್, ಲೋಕೇಶ್ ಆದುವಳ್ಳಿ ವಿಟ್ಟಲ್ ರಾವ್, ನರಸಿಂ ರಾಮ್ ಪಟೇಲ್, ರವಿ ಶೇಟ್,ರಾಘವೇಂದ್ರ ಅರಳಸುರಳಿ,ಗುರುರಾಜ ಎರಗಿ, ಗೋಪಾಲ ಚೌಹಾನ್, ಕೇಶವ್ ರಾಘವೇಂದ್ರ,ರವಿ ಶೆಟ್ಟರು, ವೆಂಕಟೇಶ್, ಗಜಾನನ ರಾಘವೇಂದ್ರ  ಮುಂತಾದವರು ಉಪಸ್ಥಿತರಿದ್ದರು.

RAILWAY..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading