SAGARA:ಭತ್ತದ ಬಗ್ಗೆ “ನಿರಾಸಕ್ತಿ” ಬೇಡ..
ಆಹಾರ ಬೆಳೆಗಳಿಗೂ ಆದ್ಯತೆ ನೀಡಿ: ಗೋಪಾಲಕೃಷ್ಣ ಬೇಳೂರು..


ಸಾಗರ: ವ್ಯಾಪಕವಾಗಿ ಭತ್ತ ಬೆಳೆಯುವ ಪ್ರದೇಶವನ್ನು ಒಳಗೊಂಡು ಭತ್ತದ ಕಣಜ ಎಂದೇ ಗುರುತಿಸಿಕೊಂಡಿದ್ದ ನಮ್ಮ ಮಲೆನಾಡ ಭಾಗದ ಕೃಷಿಯಲ್ಲಿ ಮಹತ್ತಾರವಾದ ಬದಲಾವಣೆಯಾಗಿದೆ, ಅದು ಇದೀಗ ಅಡಕೆ ಕಣಜವಾಗುತ್ತಿದೆ  ಎಂದು ಕರ್ನಾಟಕ ರಾಜ್ಯ ಅರಣ್ಯ ಮತ್ತು ಕೈಗಾರಿಕ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಇಲ್ಲಿನ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆಯಿಂದ ನೂತನವಾಗಿ ನಿರ್ಮಾಣಗೊಂಡ ಉಪ ಕೃಷಿ ನಿರ್ದೇಶಕರ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಇದರಿಂದಾಗಿ ಆಹಾರೋತ್ಪನ್ನ ಬೆಳೆ ಕ್ಷೀಣ ಸುತ್ತಿರುವುದು ಕಂಡು ಬರುತ್ತಿದೆ ಈ ಹಿಂದೆ ಭದ್ರಾವತಿಯಿಂದ ಆರಂಭಗೊAಡು ಈ ಭಾಗದ ಪ್ರಧಾನ ಕೃಷಿ ವ್ಯವಸ್ಥೆ ಭತ್ತವಾಗಿತ್ತು ಆದರೆ ಪ್ರಸ್ತುತ ರೈತರು ಅಡಕೆಯ ಮೇಲೆ ಅವಲಂಬಿತರಾಗಿದ್ದಾರೆ, ದರವೂ ಸ್ವಲ್ಪ ಪ್ರಮಾಣದಲ್ಲಿ ದೊರೆತ ಕಾರಣ ಆಧುನಿಕ ಜೀವನಕ್ಕೆ ತೆರೆದುಕೊಂಡಿದ್ದಾರೆ ಎಂದ ಅವರು, ಕೃಷಿ ಇಲಾಖೆ ರೈತರಲ್ಲಿ ಕೃಷಿಯ ಆಗುಹೋಗುಗಳ ಕುರಿತು ಜಾಗೃತಿ ಮೂಡಿಸುವ ಜತೆಗೆ ಸಕಾಲದಲ್ಲಿ ಸೂಕ್ತ ಸಲಹೆ ನೀಡುವ ಕೆಲಸವನ್ನು ಮಾಡಬೇಕಿದೆ ಎಂದರು.


ಬಹುತೇಕ ರೈತರಿಗೆ ಇಂದಿಗೂ ಕೃಷಿಗೆ ಪೂರಕ ಔಷಧ ಇತ್ಯಾದಿ ಬಳಕೆಯ ವಿಧಾನ ಪ್ರಮಾಣ ತಿಳಿದಿಲ್ಲ ಈ ಕುರಿತು ಇಲಾಖೆ ಗ್ರಾಮ ಗ್ರಾಮಗಳಲ್ಲಿ ಕೃಷಿ ತರಬೇತಿ ಕರ‍್ಯಕ್ರಮ ಹಮ್ಮಿಕೊಂಡು ಮಾರ್ಗದರ್ಶನ ನೀಡಬೇಕು ಎಂದರು.
ನಗರ ಸಭೆಯ ಸದಸ್ಯರಾದ ನಾಗರತ್ನ, ಶಂಕರ್ ಅಳ್ವೆಕೋಡಿ, ಗಣಪತಿ ಮಂಡಗಳಲೆ, ರವಿ ವಿಜಯನಗರ, ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಹೊಳೆಯಪ್ಪ, ಭವ್ಯ, ಜಂಟಿ ಕೃಷಿ ನಿರ್ದೇಶಕ ಡಾ. ಎಂ. ಕಿರಣ್ ಕುಮಾರ್, ಉಪ ಕೃಷಿ ನಿರ್ದೇಶಕ ಕೆ.ಆರ್. ಲೋಕೇಶ್,  ಸೊರಬ ಸಹಾಯಕ ಕೃಷಿ ನಿರ್ದೇಶಕ ಕೆ.ಜಿ. ಕುಮಾರ್, ಕೃಷಿ ಅಧಿಕಾರಿ ವಿನಾಯಕ ಮತ್ತಿತರರು ಇದ್ದರು.

SAGARA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading