DEEPOTSAVA:HOSANAGARAಹೊಸನಗರದ ಶ್ರೀ ಮಹೇಶ್ವರ ಪಾರ್ವತಿ ಗಣಪತಿ ದೇವಸ್ಥಾನದ “ಕಾರ್ತಿಕ ದೀಪೋತ್ಸವ”

ಹೊಸನಗರ: ಪಟ್ಟಣದ ಪುರಾತನ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಮಹೇಶ್ವರ ಪಾರ್ವತಿ ಗಣಪತಿ ದೇವಸ್ಥಾನದ ಕಾರ್ತಿಕ ದೀಪೋತ್ಸವ  ದಿನಾಂಕ 30-11-2024 ಆಚರಿಸಲು ನಿಶ್ಚಯಿಸಲಾಗಿದೆ ಎಂದು ದೀಪುತ್ಸವ ಸಮಿತಿ ತಿಳಿಸಿದೆ.ಸ್ವಸ್ತಿ ಶ್ರೀ ಕ್ರೋಧಿನಾಮ ಸಂವತ್ಸರದ ದಕ್ಷಿಣಾಯನ ಶರದ್ಯತು ಕಾರ್ತಿಕ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ ಶನಿವಾರ ಬೆಳಿಗ್ಗೆ 9-00 ಗಂಟೆಯಿಂದ 12-30ರ ವರೆಗೆ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ
ಷಣ್ಣಾಳಿಕೇರ ಮಹಾಗಣಪತಿ ಹವನ, ಶತರುದ್ರಾಭಿಷೇಕ ಪೂರ್ಣಾಹುತಿ, ಕುಂಕುಮಾರ್ಚನೆ, ತುಳಸಿಅರ್ಚನೆ, ಪ್ರಪ್ರಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ.
ಮಧ್ಯಾಹ್ನ 1.00 ರಿಂದ ಮತ್ತು ರಾತ್ರಿ 9.00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಇರುತ್ತದೆ.


ರಾತ್ರಿ 10.00 ಗಂಟೆಯಿಂದ ಶ್ರೀ ಮಹೇಶ್ವರ ಪಾರ್ವತಿ ಗಣಪತಿ ದೇವಸ್ಥಾನದ ಆವರಣದಲ್ಲಿ ಹಾಕಿರುವ ಭವ್ಯ ರಂಗಮಂಟಪದಲ್ಲಿ ಯಕ್ಷಾಭಿಮಾನಿ ಕಲಾವಿದರಿಂದ “ಯಕ್ಷಗಾನ ಬಯಲಾಟ"
"ಜಾಂಬವತಿ ಕಲ್ಯಾಣ"
ಎಂಬ ಸೀಮಿತಾವಧಿಯ ಪುಣ್ಯಕಥಾಭಾಗವನ್ನು ಸುಂದರವಾಗಿ ಅಭಿನಯಿಸಿ ತೋರಿಸಲಿದ್ದಾರೆ.
ಭಕ್ತಾದಿಗಳು ತನು-ಮನ-ಧನ ಸಹಾಯದಿಂದ ಹಲವು ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಚಿರುಗುವ ಊರಿನ ಈ ವೈಭವಯುತ ದೀಪೋತ್ಸವದಲ್ಲಿ ಪಾಲ್ಗೊಂಡು, ಶ್ರೀ ಭಗವತ್ಕೃಪೆಗೆ ಪಾತ್ರರಾಗಿ, ಶ್ರೀ ಸ್ವಾಮಿಯ ಉತ್ಸವವನ್ನು ಚೆಂದಗಾಣಿಸಿಕೊಡಬೇಕಾಗಿ ಹಾಗು
ಸಕಲ ಭಕ್ತಾದಿಗಳು ದೇವಸ್ಥಾನದ ಮಹಾದ್ವಾರದ ವೃತ್ತಕ್ಕೆ ಆಗಮಿಸಿ, ಹಣ್ಣು-ಕಾಯಿ, ಪೂಜೆ ಸಲ್ಲಿಸಿ ಕೃತಾರ್ಥರಾಗಲು ಈ ಮೂಲಕ ಸಮಿತಿ ಕೋರಿದೆ..

DEEPOTSAVA:HOSANAGARA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading