KALAGODU RATHNAKARA: ಮತದರಾರ ಪಟ್ಟಿ ಪರಿಷ್ಕರಣೆ ಅವೈಜ್ಞಾನಿಕ…
ಇದು ಅರ್ಹ ಮತದಾರರನ್ನು ಮತದಾನದಿಂದ ವಂಚಿತರಾಗಿಸುತ್ತದೆ: ಕಲಗೋಡು ರತ್ನಾಕರ್

ಹೊಸನಗರ: ಮತದಾರರ ಪಟ್ಟಿ ಪರಿಷ್ಕರಣೆ ಅರ್ಹ ಮತದಾರರ ಕೈಬಿಡುವಂತಹ ಪ್ರಕ್ರಿಯೆಯಾಗಿದ್ದು ಇದು ಅವೈಜ್ಞಾನಿಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಆರೋಪಿಸಿದರು.
ಈ ಕುರಿತಾಗಿ ಪಟ್ಟಣದ ಗಾಂಧಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ ಮತದಾರರ ಪಟ್ಟಿ ಪರಿಷ್ಕರಣೆಯು ಪಾರದರ್ಶಕವಾಗಿಲ್ಲ ಇದು ಮತದಾರರಲ್ಲಿ ಗೊಂದಲ ಮತ್ತು ಸಂಶಯ ವನ್ನು ಉಂಟುಮಾಡುತ್ತಿದೆ ಈ ಪ್ರಕ್ರಿಯೆ ಲಕ್ಷಾಂತರ ಮತದಾರರ ಹಕ್ಕನು ಕಸಿದುಕೊಳ್ಳುತಿದ್ದು ಎಂದರು
ಈ ಪ್ರಾಕ್ರಿಯಲ್ಲಿ 2002ರ ನಂತರ ಮದುವೆಯಾದವರು ತಮ್ಮ ಮತದಾನ ಹಕ್ಕನ್ನು ಅವರು ಮದುವೆಯಾದ ಸ್ಥಳದಿಂದ ಗಂಡನ ಮನೆಗೆ ವರ್ಗಾಯಿಸಬೇಕಾಗುತ್ತದೆ. ಇದು ಮತದಾರರಿಗೆ ಮ್ಯಾಪಿಂಗ್ ಮಾಡುವುದು ಕಷ್ಟಕರವಾಗಿದೆ. ಮದುವೆಯಾದವರು ಅವರು ಹುಟ್ಟಿ ಬೆಳೆದ ಸ್ಥಳದಿಂದ ಅಥವಾ ಹಿಂದೆ ಮತದಾನ ಮಾಡಿದ ಸ್ಥಳದಿಂದ ತಂದೆ-ಮಗಳ ಸಂಬಂಧದ ಬಗ್ಗೆ ಹಾಗೂ ಅಲ್ಲಿ ಮತದಾನ ಮಾಡಿದ ಚುನಾವಣೆ ಗುರುತಿನ ಚೀಟಿ ನಂಬರ್ ತರಬೇಕಾಗಿದ್ದು. ಇದು ಮತದರಿಗೆ ಬಹಳ ಗೊಂದಲವನ್ನು ಉಂಟುಮಾಡುತ್ತಿದೆ.ಕೂಡಲೇ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಸರ್ಕಾರಿ ಅಧಿಕಾರಿಗಳ ಮೂಲಕ ಎಲ್ಲರೂ ಮ್ಯಾಪಿಂಗ್ ಮಾಡಿಸಬೇಕು ಎಂದರು.
ಈ ಪ್ರಕ್ರಿಯೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ರೀತಿಯ ಪ್ರಚಾರ ನೀಡದೆ ಚುನಾವಣಾ ಆಯೋಗದ ಮೂಲಕ ಸರ್ಕಾರಿ ಅಧಿಕಾರಿಗಳ ಮೂಲಕ ಕೆಲಸ ನಿರ್ವಹಿಸುತ್ತಿದ್ದು ಇದರ ಬಗ್ಗೆ ಪ್ರಚಾರ ನೀಡಬೇಕು ಹಾಗೂ ಮನೆ-ಮನೆಗೆ ಪ್ರಚಾರ ಮಾಡಬೇಕು ಎಂದು ತಿಳಿಸಿದರು. ಹಾಗೆಯೇ ಒಬ್ಬ ಮತದಾರ ಕೂಡ ಮತದಾನ ಪ್ರಕ್ರಿಯೆಯಿಂದ ವಂಚಿತನಾಗಬರದು ಈ ನಿಟ್ಟಿನಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರಚಾರ ಕಾರ್ಯ ಕೈಗೊಂಡು ಮತದಾರರಿಗೆ ವಿಷಯ ಈ ಕುರಿತಾಗಿ ಮಾಹಿತಿಯನ್ನು ನೀಡುತ್ತಿದ್ದು ಮತದಾರರು ಈ ಕುರಿತಾಗಿ ತಾಲ್ಲೂಕಿನ ಸಂಬಂಧಪಟ್ಟ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ ಎಂ.ಪಿ ಸುರೇಶ್, ಬಾಳೆಕೊಪ್ಪ ಗಣೇಶ್, ಜಯನಗರ ಗುರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

KALAGODU RATHNAKARA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe