
ಹೊಸನಗರ: ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರಮಠದ
ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ದೇವರ
ಸನ್ನಿಧಿಯಲ್ಲಿ ಫೆ. 25 ರಂದು ಗೋಪಾಲಕೃಷ್ಣ ದೇವರ
ಪ್ರತಿಷ್ಠಾ ವರ್ಧಂತಿ, ಗೋದೀಪ ಮಹೋತ್ಸವ, ವಿಷ್ಣು
ಸಹಸ್ರನಾಮ ಪಠಣ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ ,
ಲೇಖನ ಯಜ್ಞ ಸಮರ್ಪಣೆ ಸೇರಿದಂತೆ ಲೋಕದ
ಯೋಗಕ್ಷೇಮದ ವಿಶೇಷ ಪ್ರಾರ್ಥನೆಯೊಂದಿಗೆ
ಗೋಲೋಕ ವರ್ಷ ಸಂಭ್ರಮದ ಕೃಷ್ಣಾರ್ಪಣಮ್
ಕಾರ್ಯಕ್ರಮ ನಡೆಯಲಿದೆ.
ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಅವರ
ಗೋಸಂರಕ್ಷಣಾ ಸಂಕಲ್ಪಕ್ಕೆ ಮೂಲಸ್ಥಾನವಾದ ಗೋವರ್ಧನ
ಗಿರಿಧಾರಿ ದೇವಸ್ಥಾನದಲ್ಲಿ ಕಳೆದ ಹಲವು ವರ್ಷಗಳಿಂದ ಈ ವಿಶಿಷ್ಠ
ಕಾರ್ಯಕ್ರಮಗಳು ವರ್ಷವೂ ನಡೆಯುತ್ತ ಬಂದಿದೆ.
ಈ ಬಾರಿ
ಫೆ. 25 ರ ಸಂಜೆ ನಡೆಯುವ ಗೋದೀಪ ಮಹೋತ್ಸವ ಬಲು
ವಿಶಿಷ್ಟತೆಯನ್ನು ಒಳಗೊಂಡಿದೆ.
ಬುಧವಾರದಿಂದಲೇ ಭಾಗವತ ಸಪ್ತಾಹ ಧಾರ್ಮಿಕ
ಕಾರ್ಯಕ್ರಮ ಆರಂಭಗೊಂಡಿದೆ. ಫೆ. 24 ರವರೆಗೆ 7 ದಿನಗಳ ಕಾಲ ನಿತ್ಯ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12.30
ರವರೆಗೆ ಭಾಗವು ಸಪ್ತಾಹ ಜರುಗಲಿದೆ. ಫೆ. 24 ರಂದು ಗೋಸಂಪದಾಭಿವೃದ್ದಿ,
ಕ್ಷೇತ್ರಪುಷ್ಠಿ ಮತ್ತು ಲೋಕಕಲ್ಯಾಣಾರ್ಥವಾಗಿ ವಿವಿಧ
ಧಾರ್ಮಿಕ ಕಾರ‍್ಯಕ್ರಮ ನಡೆಯಲಿದೆ. ಫೆ. 24 ರ ಸಂಜೆ
ಕ್ಷೇತ್ರಕ್ಕೆ ಸ್ವಾಮೀಜಿ ಅವರ ಆಗಮನವಾಗಲಿದೆ.
ಫೆ. 25 ರಂದು ಬೆಳಗ್ಗೆ ಶ್ರೀಪೂಜೆ, ಪಾದುಕ ಪೂಜೆ ಮತ್ತು 7
ಗಂಟೆಗೆ ಸೋಪಾನಪೂಜೆ ಹಾಗೂ ಪ್ರತಿಷ್ಠಾ ವರ್ಧಂತಿ
ನಡೆಯಲಿದೆ. ನಂತರ ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ,
ಪಾಂಚಜನ್ಯ ಸಮರ್ಪಣೆ, ಗೋವುಗಳಿಗೆ ಗೋಗ್ರಾಸ
ಸಮರ್ಪಣೆ ಮತ್ತಿತರ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಸಂಜೆ ಗೋದತ್ತು ದಾನಿಗಳೊಂದಿಗೆ ಸಂವಾದ, ಗೌರವ ಸಮ್ಮಾನ, ಗೋಪೂಜೆ, 1008 ಮಾತೆಯರಿಂದ ಗೋನೀರಾಜನ
ಹಾಗೂ ಶ್ರೀಗಳವರಿಂದ ಗೋಸಂದೇಶ ಇರಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ
ತಿಳಿಸಿದೆ.
RAMACHANDRAPURA MATA.
Discover more from Prasarana news
Subscribe to get the latest posts sent to your email.
