SAND MAFIA:ಮರಳು ಮಾಫಿಯಾಗೆ ಕಡಿವಾಣ ಹಾಕದಿದ್ದಲ್ಲಿ ಬಿಜೆಪಿಯಿಂದ ಪ್ರತಿಭಟನೆ: ಹರತಾಳು ಹಾಲಪ್ಪ.

ಶಿವಮೊಗ್ಗ: ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮರಳು ಶಿ ಮಾಫಿಯಾ ಮಿತಿ ಮೀರಿದೆ. ಶಾಸಕರ ಆಣತಿಯಂತೆ ” ಪೊಲೀಸರು ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಹರತಾಳುಹಾಲಪ್ಪ ಎಚ್ಚರಿಕೆ ನೀಡಿದರು.

ಶಿವಮೊಗ್ಗ ಎಸ್ಪಿ ಕಚೇರಿಗೆ ಶುಕ್ರವಾರ ಬಿಜೆಪಿ ನಿಯೋಗ ದೊಂದಿಗೆ ತೆರಳಿ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಅವರೊಂದಿಗೆ ಮರಳು ಮಾಫಿಯಾ ಬಗ್ಗೆ ದೂರು ಸಲ್ಲಿಸಿ. ಮರಳು ಮತ್ತು ಜಂಬಿಟ್ಟಿಗೆ ಕಲ್ಲು ಸಾಗಣೆ ಮಾಡುವವರಲ್ಲಿ ಪೊಲೀಸರು ಹಾಗೂ ಕೆಲ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


ಶರಾವತಿ ಮರಳನ್ನು ಆಯ್ದ ಜನರು ಮಾತ್ರ ಸಾಗಣೆ ಮಾಡುತ್ತಿದ್ದಾರೆ. ಇತರರಿಗೆ ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ತಹಸೀಲ್ದಾ‌ರ್ ಮೂಲಕ ತಡೆಯೊಡ್ಡುತ್ತಿದ್ದಾರೆ. ಇಂಥವರು ಮರಳು ತೆಗೆದುಕೊಂಡು ಹೋಗಬಾರದೆಂದುತಡೆಯುತ್ತಿದ್ದಾರೆ. ಕೆಳಹಂತದ ಸಿಬ್ಬಂದಿಯನ್ನು ಬಳಸಿಕೊಂಡು ಸ್ಥಳೀಯ ಪುಢಾರಿಗಳಿಂದ ಮರಳು ಅನಧಿಕೃತವಾಗಿ ಎಗ್ಗಿಲ್ಲದೆ ಸಾಗಣೆಯಾಗುತ್ತಿದೆ. ಅವರಿಗೆಲ್ಲ ಯಾವ ಅನುಮತಿ ಇದೆ ಎಂದು ಹಾಲಪ್ಪ ಪ್ರಶ್ನಿಸಿದರು. ಆನಂದಪುರ ಸುತ್ತಮುತ್ತ ಜಂಬಿಟ್ಟಿಗೆ ಕ್ವಾರಿ ಇದ್ದು ಕೆಲವರು ರಾಯಲ್ಟಿ ಕಟ್ಟುತ್ತಿದ್ದಾರೆ. ಇನ್ನು ಕೆಲವರು ಕಟ್ಟದೇ ತೆಗೆದುಕೊಂಡು ಹೋಗುತ್ತಿದ್ದಾರೆ.ಆನಂದಪುರ, ರಿಪ್ಪನ್‌ಪೇಟೆ, ನಗರ ಪೊಲೀಸರು ತಮಗೆ ಬೇಕಾದವರಿಗೆ ಮಾತ್ರ ಬಿಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹಾಗೂ ಹೊಸನಗರ ಹಾಗೂ ಸಾಗರ ಭಾಗದ ಪ್ರಮುಖರು ಉಪಸ್ಥಿತರಿದ್ದರು.

SAND MAFIA.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading