
ಸಾಗರ: ನನ್ನ ಅಧಿಕಾರ ಅವಧಿಯಲ್ಲಿ ಪಕ್ಷಬೇಧವಿಲ್ಲದೆ ನಮ್ಮವರು ತಮ್ಮವರನ್ನದೆ ಅಧಿಕಾರವನ್ನ ನಡೆಸಿದ್ದೇನೆ. ರಾಜಕೀಯ ನಾಯಕರುಗಳು ಬಡವರ ಕೂಲಿ ಕಾರ್ಮಿಕರ ಪರವಾಗಿ ಇರಬೇಕೆಂದು ಅರಿತಿದ್ದೇನೆ. ಆದರೆ ಇದೀಗ ನನ್ನನ್ನು ಕಲ್ಲು ಕ್ವಾರೆ. ಮರಳು ಸಾಗಾಟ ಹಾಗೂ ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಬಡ ಕಾರ್ಮಿಕರ ವಿರುದ್ಧ ಎಂಬಂತೆ ಕೆಲವರು ಬಿಂಬಿಸತೊಡಗಿದ್ದಾರೆ ಎಂದು ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು..
ಈ ಕುರಿತಾಗಿ ಮಾತನಾಡಿದ ಅವರು ಕಳೆದ ವಾರ ಶಿವಮೊಗ್ಗ ಎಸ್. ಪಿ ಅವರಿಗೆ ಮರಳು ಹಾಗೂ ಕಲ್ಲು ಕ್ವಾರಿ ವಿಚಾರವಾಗಿ ಮನವಿಯನ್ನು ಮಾಡಿದ್ದೆ ಆದರೆ ಅದರಲ್ಲಿ ಮರಳು ಹಾಗೂ ಕಲ್ಲು ಕ್ವಾರಿಯನ್ನ ನಿಲ್ಲಿಸುವಂತೆ ಕೋರಿಕೊಂಡಿಲ್ಲ ಬದಲಾಗಿ ಸಾಗರ ಹೊಸನಗರ ತಾಲೂಕಿನಲ್ಲಿ ತಾರತಮ್ಯವಾಗುತ್ತಿದ್ದು ಅದು ನಿಲ್ಲಬೇಕು ಎಂದು ಹೇಳಿದ್ದೇನೆ.
ಹಿಂದೆ ಅಭಾಗದ ಶಾಸಕನಾಗಿದ್ದ ನನಗೆ ಅಲ್ಲಿನ ಜನರ ಬದುಕಿನ ಬಗ್ಗೆ ಅರಿವಿದೆ ತಾಲೂಕಿನಲ್ಲಿ ಮರಳು ಹಾಗೂ ಕಲ್ಲು ಕ್ವಾರೆ ಯನ್ನೆ ನಂಬಿಕೊಂಡು ಬಹಳಷ್ಟು ಕುಟುಂಬ ಜೀವನವನ್ನು ನಡೆಸುತ್ತಿದೆ ಅದನ್ನು ನಿಲ್ಲಿಸಿದರೆ ಬಡವರು ಹೇಗೆ ಜೀವನವನ್ನು ನಡೆಸುತ್ತಾರೆ.

ಈಗ ನನ್ನ ವಿರುದ್ಧ ಸುಳ್ಳು ಆರೋಪವನ್ನು ಮಾಡುತ್ತಿರುವವರು ಅವರ ಅಧಿಕಾರ ಅವಧಿಯಲ್ಲಿ ಎಷ್ಟು ಮರಳು ಲಾರಿಗಳನ್ನ ಗಾಳಿ ತೆಗೆದು ರಸ್ತೆಯಲ್ಲಿ ನಿಲ್ಲಿಸಿದ್ದರು ಇಂದು ಅದು ಮರೆತು ಹೋಗಿರಬೇಕು. ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದು ಸಹ ಅವರಿಗೆ ನೆನಪಿಲ್ಲವೇನು. ಇಲ್ಲಿ ನನ್ನ ಜೊತೆ ಸಂಪರ್ಕಿ ಇರುವವರು ನಮ್ಮ ಮನೆಗೆ ಬಂದವರು ಬಿಜೆಪಿ ಮುಖಂಡರೊಂದಿಗೆ ಸಂಪರ್ಕ ಇರುವವರನ್ನು ಹುಡುಕಿ ಕೇಸ್ ಅನ್ನು ದಾಖಲಿಸುತ್ತಾರೆ ಇದಕ್ಕೆ ನಮ್ಮ ವಿರೋಧ ಹೊರೆತು ಮರಳು ಸಾಗಾಟ ಹಾಗೂ ಕಲ್ಲು ಕ್ವಾರಿ ಮತ್ತು ಅದನ್ನು ನಂಬಿ ಜೀವನ ಸಾಗಿಸುವವರ ವಿರುದ್ಧವಲ್ಲ ಇದನ್ನ ಸ್ಪಷ್ಟಪಡಿಸುವ ಸಲುವಾಗಿ ಈ ಪತ್ರಿಕಾಗೋಷ್ಠಿಯನ್ನು ಕರೆದಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ್ ಹೋನಾಗೊಡು ಹಾಗೂ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು...
HARATHALU HALAPPA..
Discover more from Prasarana news
Subscribe to get the latest posts sent to your email.
