
ಹೊಸನಗರ: ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಬಹುತೇಕ ಹೊರ ಬಿದ್ದಿದೆ. ಆಡಳಿತ ಪಕ್ಷ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ ಹಿನ್ನೆಲೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

ಬಳಿಕ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರ ಮೌಳಿ ಈ ಮೂಲಕ ರಾಜ್ಯ ಸರ್ಕಾರದ ವರ್ಚಸ್ಸು ತಗ್ಗಿಲ್ಲ ಮಾನ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಹಳಷ್ಟು ಜನಪರ ಯೋಜನೆಗಳನ್ನು ತಂದಿದ್ದು ಇದರಿಂದ ರಾಜ್ಯದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವನ್ನು ನೀಡಿದರೆ ರಾಜ್ಯದ ಅಭಿವೃದ್ಧಿಗೆ ಯಾವುದೇ ತೊಡಗಿರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮತದಾರ ಈ ಮೂಲಕ ತಿಳಿಸಿದ್ದಾರೆ ಎಂದರು ಹಾಗೆಯೇ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದಂತಹ ಎಲ್ಲ ನಾಯಕರಿಗೂ ಹಾಗೂ ಮತದಾರರಿಗೆ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಟೌನ್ ಘಟಕದ ಗುರುರಾಜ್, ಚಂದ್ರಕಲಾ, ಪ್ರಭಾಕರ್, ಸದಾಶಿವ, ಮಂಜು ಸಣ್ಣಕ್ಕಿ, ಸುದೀಪ್, ಎಂಪಿ ಸುರೇಶ್, ಗುರುರಾಜ್, ಕೃಷ್ಣಮೂರ್ತಿ, ಗುರು ಜಯನಗರ, ಉಪಸ್ಥಿತರಿದ್ದರು.
BY-ELECTION
Discover more from Prasarana news
Subscribe to get the latest posts sent to your email.
