
ಹೊಸನಗರ (ಶಿವಮೊಗ್ಗ):
ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತರನ್ನು ಹಿರಿಯೋಗಿ ಗ್ರಾಮದ ದೇವರಾಜ (47) ಎಂದು ಗುರುತಿಸಲಾಗಿದೆ. ಮನೆಯ ಮೆಟ್ಟಿಲು ಹತ್ತುವ ವೇಳೆ ಕೈಯಲ್ಲಿದ್ದ ನಾಡ ಬಂದೂಕಿನ ಟ್ರಿಗರ್ ಆಕಸ್ಮಿಕವಾಗಿ ಎಳೆಯಲ್ಪಟ್ಟು, ಗುಂಡು ನೇರವಾಗಿ ಹಣೆಗೆ ತಗುಲಿ ಸ್ಥಳದಲ್ಲೇ ಸಾವಿಗೀಡಾದರು.
ಅಪಘಾತದ ವೇಳೆ ಪತ್ನಿ ಅಡುಗೆ ತಯಾರಿಸುತ್ತಿದ್ದು, ಮಕ್ಕಳು ಕೋಣೆಯಲ್ಲಿ ಓದುತ್ತಿದ್ದರು. ಮನೆ ಮುಂಭಾಗದಿಂದ ಗುಂಡಿನ ಸದ್ದು ಕೇಳಿ ಬಂದು ನೋಡಿದಾಗ ದೇವರಾಜ ರಕ್ತಸಿಕ್ತವಾಗಿ ಬಿದ್ದಿದ್ದು, ಪಕ್ಕದಲ್ಲೇ ಬಂದೂಕು ಪತ್ತೆಯಾಗಿದೆ.
ಪತ್ನಿಯ ದೂರಿನ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
RIPPONPET NEWS..
Discover more from Prasarana news
Subscribe to get the latest posts sent to your email.
