
ಹೊಸನಗರ: ಪಟ್ಟಣದ 9ನೇ ವಾರ್ಡಿನ ರಾಮಕ್ಷತ್ರಿಯ ರಸ್ತೆಯನ್ನು ಶೀಘ್ರ ಸರಿಪಡಿಸುವಂತೆ ಅಲ್ಲಿನ ನಿವಾಸಿಗಳು ಇಂದು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದರು.
ಮನವಿಯಲ್ಲಿ ಕಳೆದ 20 ವರ್ಷಗಳ ಹಿಂದೆ ಆ ವಾರ್ಡ್ನಲ್ಲಿ ಡಾಂಬರ ರಸ್ತೆಯನ್ನು ಮಾಡಲಾಗಿದ್ದು ಅದು ಈಗ ಸಂಪೂರ್ಣ ಹಾಳಾಗಿದ್ದು ದೊಡ್ಡ ಗಾತ್ರದ ಗುಂಡಿಗಳು ರಸ್ತೆಯಲ್ಲಿ ನಿರ್ಮಾಣವಾಗಿದೆ ಅಲ್ಲದೆ ಪ್ರತಿನಿತ್ಯ ಹತ್ತಾರು ವಾಹನಗಳು ಅಲ್ಲಿ ಸಂಚರಿಸುತ್ತಿದ್ದು ಬಹಳಷ್ಟು ಬಾರಿ ಅಪಘಾತವು ಸಹ ಸಂಭವಿಸಿದೆ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಬಹಳಷ್ಟು ಬಾರಿ ತಂದರು ಯಾವುದೇ ಪ್ರಯೋಜನವಾಗಿಲ್ಲ ಅಲ್ಲದೆ ಆ ಕೆಟ್ಟು ಹೋದ ರಸ್ತೆಯಲ್ಲಿ ನಿತ್ಯ ಸಂಚರಿಸುವುದು ಬಹಳಷ್ಟು ಕಷ್ಟವಾಗಿದ್ದು ಕೂಡಲೇ ರಸ್ತೆಯನ್ನು ಸರಿಪಡಿಸಿ ಕೊಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಅರ್ಪಣಾ, ಶ್ರೀದೇವಿ, ಅಶ್ವಿನಿ, ಸವಿತಾ ಮುದುಕರ್, ಜಯ,ಬೇಬಿ, ರೇಖಾ ಮುಂತಾದವರು ಉಪಸ್ಥಿತರಿದ್ದರು.
PATTANA PANCHAYAT
Discover more from Prasarana news
Subscribe to get the latest posts sent to your email.
