UJJIVAN BANK:ಶೈಕ್ಷಣಿಕ ಪ್ರೇಮ ಮೆರೆದ ಉಜ್ಜೀವನ್ ಬ್ಯಾಂಕ್…
ಜಯನಗರ ಸರ್ಕಾರಿ ಶಾಲೆಗೆ “ಗ್ರಂಥಾಲಯ ಮತ್ತು ಶೌಚಾಲಯ” ಕಟ್ಟಡ ಕೊಡುಗೆ….

ಹೊಸನಗರ: ತಾಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಯನಗರ ಸರ್ಕಾರಿ ಪ್ರೌಢಶಾಲೆಗೆ ಉಜ್ಜಿವನ್ ಬ್ಯಾಂಕ್, ಛೋಟೆ ಕದಮ್, ಪರಿಣಾಮ್ ಫೌಂಡೇಶನ್ ಸಹಯೋಗದಲ್ಲಿ 10 ಲಕ್ಷ ರೂ ಅನುದಾನದಲ್ಲಿ ಸುಸರ್ಜಿತ ಗ್ರಂಥಾಲಯ ಮತ್ತು ಶೌಚಾಲಯವನ್ನು ನಿರ್ಮಿಸುವ ಮೂಲಕ ಶೈಕ್ಷಣಿಕ ಪ್ರೇಮವನ್ನು ಸಂಸ್ಥೆ ಮೆರೆದಿದೆ.
ನಿನ್ನೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್ ಆರ್ ಕೃಷ್ಣಮೂರ್ತಿ ಗ್ರಂಥಾಲಯ ಹಾಗೂ ಶೌಚಾಲಯ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆದಂತೆ ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಕರು ಹಾಗೂ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹೀಗೆ ಎಲ್ಲದರಲ್ಲಿಯೂ ಉತ್ತಮವಾದಂತಹ ವಾತಾವರಣವನ್ನು ನಿರ್ಮಾಣ ಮಾಡಿಕೊಂಡು ಬರುತಿದೆ ಅಲ್ಲದೆ ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುವ ಕೆಲಸಕ್ಕೆ ಇತ್ತೀಚಿನ ದಿನಗಳಲ್ಲಿ ಮುಂದಾಗುತ್ತಿದ್ದಾರೆ ಅದರಲ್ಲಿಯೂ ಹೊಸನಗರ ತಾಲೂಕಿನ ಬಹಳಷ್ಟು ಶಾಲೆಗಳು ಶಿಕ್ಷಣ ಸೇರಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ನೂರರಷ್ಟು ಫಲಿತಾಂಶವನ್ನು ನೀಡುತ್ತಿದೆ ಇಂತಹ ಸಂದರ್ಭದಲ್ಲಿ ಉಜ್ಜೀವನ್ ಬ್ಯಾಂಕ್ ನಂತಹ ಖಾಸಗಿ ಹಣಕಾಸು ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಬಹಳಷ್ಟು ಸಂತಸದ ವಿಚಾರವಾಗಿದೆ ಇವುಗಳ ನಿರ್ಮಾಣದಿಂದಾಗಿ ಶಾಲೆಗಳ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಹಣಕಾಸು ಸಂಸ್ಥೆಗಳು ಕೇವಲ ಆರ್ಥಿಕ ವ್ಯವಹಾರ ಅಷ್ಟೇ ಅಲ್ಲದೆ ಇಂತಹ ಉತ್ತಮ ಜನಪರ ಕೆಲಸಗಳನ್ನು ಮಾಡಬಹುದು ಎಂಬುದನ್ನು ಈ ಸಂಸ್ಥೆ ತೋರಿಸಿಕೊಟ್ಟಿದೆ ಈ ಸರ್ಕಾರಿ ಶಾಲೆಯ ಪರವಾಗಿ ನಾನು ಆ ಸಂಸ್ಥೆಯನ್ನ ಅಭಿನಂದಿಸುತ್ತೇನೆ ಎಂದರು.


ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋಪಿನಾಥ್ ಮಾತನಾಡಿ ನಮ್ಮ ಸರ್ಕಾರಿ ಶಾಲೆಗೆ ಉಜ್ಜೀವನ್ ಬ್ಯಾಂಕ್ ಒಂದು ಉತ್ತಮವಾದ ಕೊಡುಗೆಯನ್ನು ನೀಡಿದ್ದು ಅವರ ಈ ಸೇವೆಯನ್ನು ಈ ಸರ್ಕಾರ ಶಾಲೆ ಸೇರಿ ಇಡಿ ಗ್ರಾಮವೇ ಸ್ಮರಿಸುತ್ತದೆ ಇಂಥದ್ದೆ ಉಪಯುಕ್ತವಾದಂತ ಸೇವೆಗಳು ನಮ್ಮ ಗ್ರಾಮಕ್ಕೆ ನಿಮ್ಮಿಂದ ನಿರಂತರವಾಗಿ ದೊರಕುತ್ತಿರಲಿ ಇದಕ್ಕೆ ಸಹಕರಿಸಿದ ಬ್ಯಾಂಕಿನ ಮ್ಯಾನೇಜರ್ ಆದಂತಹ ನಾಗರಾಜ್ ಹಾಗು ಎಲ್ಲಾ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಉಜ್ಜಿವನ್ ಬ್ಯಾಂಕ್ ನ ಹಿರಿಯ ಮ್ಯಾನೇಜರ್ ಮೇಲ್ವಿನ್ ಡಿ ಮೆಲ್ಲೋ, ಮೇಲಿನ ಬೇಸಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಮಾಸ್ತಿ ಕಟ್ಟೆ ಸುಬ್ರಮಣ್ಯ, ಹಾಲಗದ್ದೆ ಉಮೇಶ್, ಲಕ್ಷ್ಮಣ್ ಗೌಡ, ಚಂದ್ರಕಲಾ, ಚೇತನ್, ಶಾಲಾ ಮುಖ್ಯೋಪಾಧ್ಯಾಯರಾದ ರಂಗಸ್ವಾಮಿ, ಶಿಕ್ಷಕರಾದ ಪುಟ್ಟಪ್ಪ, ಮುಂತಾದವರು ಉಪಸ್ಥಿತರಿದ್ದರು..

UJJIVAN BANK...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe