AWARD:ಕರ್ಪೂರಿ ಠಾಕೂರ್ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ರವಿ ಬಿದನೂರು.

ಹೊಸನಗರ : ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ  ಮತ್ತು ವರದಿಗಾರರ ಸಂಘವು ನೀಡುವ ಕರ್ಪೂರಿ ಠಾಕೂರ್ ಪ್ರಶಸ್ತಿ ತಾಲೂಕಿನ ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರವಿ ಬಿದನೂರು ಆಯ್ಕೆಯಾಗಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ, ಪ್ರಬುದ್ಧ ರಾಜಕಾರಣಿ, ಭಾರತರತ್ನ ನಾಗರೀಕ ಗೌರವಕ್ಕೆ ಪಾತ್ರರಾಗಿದ್ದ,  ಪ್ರಸಿದ್ದ ಜನನಾಯಕ  ದಿವಂಗತ ಕರ್ಪೂರಿ ಠಾಕೂರ್ ಹೆಸರಿನಲ್ಲಿ  ಸಂಘ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ, ಹಿರಿಯ ಸಾಹಿತಿ, ಪತ್ರಕರ್ತ, ಮನೆಗೊಂದು ಗ್ರಂಥಾಲಯ ಯೋಜನೆಯ ರಾಜ್ಯ ನಿರ್ದೇಶಕ ಕೊಡಸೆ ಲಕ್ಷ್ಮಣ ಅವರು ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರ ವಿತರಣೆ ನಡೆಯಲಿದೆ ಎಂದು ಸಂಘ ತಿಳಿಸಿದೆ.

AWARD..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading