
ಹೊಸನಗರ: ಅಖಿಲ ಭಾರತ ಹಿಂದೂ ಮಹಾ ಸಭಾ ಹೊಸನಗರ ಘಟಕ ವತಿಯಿಂದ ಪಟ್ಟಣದ ಪೋಸ್ಟ್ ಆಫೀಸ್ ಸಮೀಪದ ವೀರ ಸಾವರ್ಕರ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯು 15ನೇ ದಿನದ ವಿಸರ್ಜನೆಯ ಅಂಗವಾಗಿ ಬೃಹತ್ ಶೋಭಾಯಾತ್ರೆ ಬುಧವಾರ ಸಡಗರ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ಗಣಪತಿಗೆ ಪೂಜೆ, ಮಹಾಮಂಗಳಾರತಿ ನಡೆಯಿತು. ಸಂಜೆ 6 ಗಂಟೆಗೆ ಆರಂಭವಾದ ಶೋಭಾ ಯಾತ್ರೆ ಪಟ್ಟಣದ ಗಣಪತಿ ದೇವಸ್ಥಾನದ ಮೂಲಕವಾಗಿ ದ್ಯಾವರ್ಸ ಅಲ್ಲಿಂದ ನೆಹರು ರಸ್ತೆ ಬಳಿಕ ಚೌಡಮ್ಮ ಬೀದಿಯ ಮೂಲಕವಾಗಿ ಕಾಳಿಕಾಪುರ ರಸ್ತೆಯಲ್ಲಿ ಸಂಚರಿಸಿ ಮಾರಿಗುಡ್ಡ ಮಾರ್ಗವಾಗಿ ಮಾವಿನಕೊಪ್ಪ ಅಲ್ಲಿಂದ ಮುಖ್ಯ ರಸ್ತೆಯ ಮೂಲಕವಾಗಿ ಕ್ರಿಶ್ಚಿಯನ್ ಕಾಲೋನಿ, ಅಂಬೇಡ್ಕರ್ ಕಾಲೋನಿ ಕೆಇಬಿ ವೃತ್ತ ಹಾಗೆಯೇ ಸಂತೆ ಮಾರುಕಟ್ಟೆ ಮಾರ್ಗ ವಾಗಿ ಮೆರವಣಿಗೆ ತೆರಳಿ ಗಣಪತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು..

ಶೋಭಾಯಾತ್ರೆಯಲ್ಲಿ ಜಿಲ್ಲೆಯ ಹಲವು ಸಾಂಸ್ಕೃತಿಕ ತಂಡಗಳು ಪಾಲ್ಗೊಂಡಿದ್ದು ಮಹಿಳಾ ಮತ್ತು ಪುರುಷ ತಂಡದ ನಾಸಿಕ್ ಬ್ಯಾಂಡ್, ನಾದಸ್ವರ, ಗೊಂಬೆ ಕುಣಿತ, ಹನುಮಂತ ವೇಷ ಎಲ್ಲಾರನ್ನು ಆಕರ್ಷಿಸಿತು.
ಎದೆ ನಡುಗಿಸುವ ಡಿಜೆ ಸದ್ದು, ಕಣ್ಣು ಕುಕ್ಕುವ ಬಣ್ಣ ಬಣ್ಣದ ವಿದ್ಯುತ್ ಬೆಳಕಿನಡಿ ಯುವಕ, ಯುವತಿಯರು ಕುಣಿಯುತ್ತಾ ಸಾಗುತ್ತಿದ್ದರೆ ಕೇಸರಿ ನದಿಯೇ ಹರಿದು ಬರುತ್ತಿರುವಂತೆ ಭಾಸವಾಗುತ್ತಿತ್ತು. ರಾಜಬೀದಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಕೇಸರಿ ಬಾವುಟಗಳ ಹಾರಾಟ ಜಯಭೋಷಣೆಗಳು ಎಲ್ಲೆಡೆ ಕೇಳಿ ಬರುತ್ತಿದ್ದವು. ಈ ನಡುವೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಶೋಭಾ ಯಾತ್ರೆಯಲ್ಲಿ ಕೆಲ ಹೊತ್ತುಗಳ ಕಾಲ ಪಾಲ್ಗೊಂಡರು.

ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ನಡುವೆ 13 ಗಂಟೆಗೂ ಅಧಿಕ ಕಾಲ ನಡೆದ ವಿಸರ್ಜನ ಶೋಭ ಯಾತ್ರೆ ವಿಜೃಂಭಣೆಯ ಗಣೇಶಮೂರ್ತಿ ವಿಸರ್ಜನೆಗೆ ಸಾಕ್ಷಿಯಾಗಿತ್ತು.
ಮೆರವಣಿಗೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷರಾದ ಪ್ರಶಾಂತ್ ಕಾರ್ಯದರ್ಶಿ ವಿನಯ್, ಹಾಗೂ ಸಮಿತಿಯ ಸದಸ್ಯರಾದ ಸುರೇಂದ್ರ ಕೋಟ್ಯಾನ್, ಗಣೇಶ್ ಮುದುಕರ, ಎಂ ಎನ್ ರಾಜು, ರಾಘವೇಂದ್ರ, ಸಂದೀಪ್, ವಿಕ್ರಂ, ಸುಬ್ರಹ್ಮಣ್ಯ, ದೀಪಕ್ ಸ್ವರೂಪ್, ಕುಮಾರ್, ಮುಂತಾದ ಸದಸ್ಯರುಗಳು ಹಾಗೆಯೇ ಪಟ್ಟಣದ ಹಲವು ರಾಜಕೀಯ ಮುಖಂಡರುಗಳು ಭಾಗಿಯಾಗಿದ್ದರು..
HINDHU MAHASABHA..
Discover more from Prasarana news
Subscribe to get the latest posts sent to your email.
