
ಹೊಸನಗರ: ಜೆಸಿಐ ಹೊಸನಗರ ಡೈಮಂಡ್ ವತಿಯಿಂದ ಜೆಸಿ ಸಪ್ತಾಹದ ಮೊದಲ ಕಾರ್ಯಕ್ರಮವನ್ನು ಜೆಸಿಎಂ ರಸ್ತೆಯಲ್ಲಿ 9 ಸೆಪ್ಟೆಂಬರ್ 2025 ರಂದು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹೊಸನಗರ ತಾಲೂಕಿನ ಪ್ರಗತಿಪರ ಕೃಷಿಕರಾದ ಶ್ರೀಯುತ ಜಗದೀಶ್ ರಾವ್ ಅವರು ಜೆಸಿಐ ಲೋಗೋ ಹೊಂದಿದ ಧ್ವಜಾರೋಹಣ ಮಾಡಿದರು.
ಅಧ್ಯಕ್ಷರಾದ ಜೆಸಿ ವಿನಾಯಕ ಕರಬ ಅವರು ಮಾತನಾಡಿ, “ಜೆಸಿ ಸಪ್ತಾಹ ಏಳು ದಿನಗಳವರೆಗೆ ನಡೆಯಲಿದ್ದು, ಪ್ರತಿವರ್ಷದಂತೆ ಈ ವರ್ಷವೂ ವಿಶಿಷ್ಟ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೆಸಿಐ ಹೊಸನಗರ ಡೈಮಂಡ್ ತಂಡ ಹಮ್ಮಿಕೊಂಡಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜೆಸಿ ಅಮಿತ್, ಪೂರ್ವಾಧ್ಯಕ್ಷರಾದ ಜೆಸಿ ಅರವಿಂದ್, ಜೆಸಿ ವಿನಾಯಕ ಅರಮನೆ, ಜೆಸಿ ವಿಶ್ವೇಶ್ವರ, ಜೆಸಿ ಗುರುರಾಜ್ ಹಾಗೂ ಅನೇಕ ಜೆಸಿ ಸದಸ್ಯರು ಉಪಸ್ಥಿತರಿದ್ದರು.
JCI DIAMOND..
Discover more from Prasarana news
Subscribe to get the latest posts sent to your email.
