JCI KODACHADRI:ವೈವಿಧ್ಯತೆಯ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದ ಜೆಸಿಐ : ಜೆಸಿಐ ಸಪ್ತಾಹದ ಅವಲೋಕನದಲ್ಲಿ ಪತ್ರಕರ್ತ ರವಿ ಬಿದನೂರು..

ಹೊಸನಗರ: ಜೇಸಿಐ ಸೇರಿದಂತೆ ಹಲವು ಸಂಸ್ಥೆ ಗಳು ಶ್ರೀಮಂತರಿಗೆ ಮಾತ್ರ ಎನ್ನುವಂತ ಸಮಯದಲ್ಲಿ ಎಲ್ಲಾ ವರ್ಗದ ಜನರ ಗಮನದಲ್ಲಿಟ್ಟು ಹೊಸನಗರದಲ್ಲಿ ವೈವಿಧ್ಯತೆಯ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದು ಜೇಸಿಐ ಕೊಡಚಾದ್ರಿ ಎಂದು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ತಿಳಿಸಿದರು.

ಜೆಸಿಐ ಹೊಸನಗರ ಕೊಡಚಾದ್ರಿ ಇವರ ಜೇಸಿ ಸಪ್ತಾಹ - 2025 ಅಂಗವಾಗಿ ನಗರದಲ್ಲಿ ಸಪ್ತಾಹದ ಅವಲೋಕನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದುಳಿದ ತಾಲೂಕು ಎಂದೇ ಬಿಂಬಿತ ವಾದ ಹೊಸನಗರದಲ್ಲಿ ಕಳೆದ ಮೂರು ದಶಕದಿಂದ ರೈತರ, ಸ್ವಾವಲಂಬಿ ಉದ್ಯೋಗ, ಆರೋಗ್ಯ ಶಿಕ್ಷಣ ಶಿಬಿರಗಳ ಜೊತೆ ಇಡೀ ಕುಟುಂಬ ಪಾಲ್ಗೊಳ್ಳುವಂತ ಮಲೆನಾಡು ವಸ್ತ್ರ ವೈಭವ, ಹಾಡು, ನೃತ್ಯ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಗಳಿಗೆ ಜೇಸಿಐ ಒತ್ತು ನೀಡುತ್ತಾ ಬಂದಿದೆ ಎಂದರು.

ಜೇಸಿಐನ ಹಿರಿಯ ಸದಸ್ಯ, ಸಾಮಾಜಿಕ ಕಾರ್ಯಕರ್ತ ಬಿ.ಎಸ್.ಸುರೇಶ್, ಜೇಸಿಐ ಕಾರ್ಯಕ್ರಮದ ಯಶಸ್ಸಿಗೆ ಮಾಧ್ಯಮದ ಕೊಡುಗೆ ತುಂಬಾ ಇದೆ. ಸೆ.9 ರಿಂದ ಜೇಸಿ ಸಪ್ತಾಹ 2025 ಆರಂಭಗೊಂಡಿದ್ದು, ಸಿಪಿಐ ಗುರಣ್ಣ ಹೆಬ್ಬಾಳ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಬಾರಿ ವಿಶೇಷವಾಗಿ ಪತ್ರಕರ್ತರ ನಿವಾಸಕ್ಕೆ ಬಂದು ಅವರನ್ನು ಗೌರವಿಸುವ ಮೂಲಕ ಸಪ್ತಾಹದ ಅವಲೋಕನ ನಡೆಸಲಾಗಿದೆ. ಗ್ರಾಮದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಮಾತ್ರವಲ್ಲ. ಸಮಸ್ಯೆ ಇತ್ಯರ್ಥ ಮಾಡುವ ಬಿದನೂರು ಕಾಳಜಿ ಮೇಲ್ಪಂಕ್ತಿಯಾಗಿದೆ ಎಂದರು.

ಈ ವೇಳೆ ಜೇಸಿಐ ಹೊಸನಗರ ಕೊಡಚಾದ್ರಿ ಅಧ್ಯಕ್ಷ ಟಿ.ವಿ.ಕಾರ್ತಿಕ್ ಅಧ್ಯಕ್ಷತೆ ವಹಿಸಿದ್ದರು.
ಜೇಸಿಐ ಕಾರ್ಯದರ್ಶಿ ಮಹೇಶ ಮಲ್ನಾಡ್, ಜೇಸಿಐ ಪ್ರಮುಖ ಬಿ.ಎಸ್.ಸುರೇಶ್, ಹರೀಶ ಮಲೇಬೈಲು, ಕೇಶವ್, ವಿನಯ ಹೆಬ್ಬೈಲು, ರಾಧಾಕೃಷ್ಣ ಪೂಜಾರಿ, ಜ್ಯೋತಿ ಪೂರ್ಣೇಶ್, ಸುಜಾತ, ಸುಶೀಲಾ, ರೇಶ್ಮಾ, ವೀಣಾ, ಇತರರು ಉಪಸ್ಥಿತರಿದ್ದರು.

JCI KODACHADRI..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe