HOSANAGARA DASARA: ದಸರಾ ಆಚರಣಾ ಸಮಿತಿ ಅಧ್ಯಕ್ಷರಾಗಿ ಡಿ ಆರ್ ವಿನಯ್  ಕುಮಾರ್ ಆಯ್ಕೆ….

ಹೊಸನಗರ: ಈ ಬಾರಿಯ ಹೊಸನಗರ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾಗಿ ಕಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಡಿ ಆರ್ ವಿನಯ್ ಕುಮಾರ್ ಆಯ್ಕೆಯಾಗಿದ್ದು ಕಾರ್ಯದರ್ಶಿಯಾಗಿ ಸದಾಶಿವ ಶ್ರೇಷ್ಠ ಯವರನ್ನ ಅಯ್ಕೆ ಮಾಡಲಾಗಿದೆ.
ಮಂಗಳವಾರ ತಾಲೂಕು ತಹಶೀಲ್ದಾರ್ ರಶ್ಮಿ ಎಚ್ ಜೆ ಇವರ ಅಧ್ಯಕ್ಷತೆಯಲ್ಲಿ ಹೊಸನಗರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 2025-26ನೇ ಸಾಲಿನ ದಸರಾ ಪೂರ್ವಭಾವಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.
ಅಧ್ಯಕ್ಷರ ಆಯ್ಕೆ ಬಳಿಕ ವಿವಿಧ ಸಮಿತಿಗಳಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ, ಉಪಾಧ್ಯಕ್ಷ ಚಂದ್ರಕಲಾ ನಾಗರಾಜ್, ಪಟ್ಟಣ ಪಂಚಾಯತ್ ಸದಸ್ಯರಾದ ಸಿಂತಿಯಾ ಸೆರಾವು, ಶಾಹಿನ ನಾಸಿರ್, ಕೃಷ್ಣವೇಣಿ, ಗುರುರಾಜ್, ನೇತ್ರಾವತಿ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹರೀಶ್ ಎಂ ಎನ್, ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್, ವಿಜೇಂದ್ರ ಸೆಟ್, ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ, ರಾಧಿಕಾ,ನಾಸಿರ್. ಮುಂತಾದವರು ಪಾಲ್ಗೊಂಡಿದ್ದರು..

HOSANAGARA DASARA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading