
ಹೊಸನಗರ: ಹೊಳೆ ದಾಟುವಾಗ ಉಕ್ಕಡ ಮಗುಚಿ ಯುವಕ ನೀರುಪಾಲಾದ ಘಟನೆ ಹೊಸನಗರ ತಾಲೂಕಿನ ಬಂಟೋಡಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ್ದು ನಾಪತ್ತೆಯಾದ ಯುವಕನಿಗಾಗಿ ಶೋಧಕಾರ್ಯ ನಿನ್ನೆ ಮಧ್ಯಾಹ್ನ ದಿಂದ ಕೈಗೊಳ್ಳಲಾಗಿತ್ತು ನಿನ್ನೆ ಕತ್ತಲಾದ ಹಿನ್ನೆಲೆ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಗಿತಗೊಳಿಸಿದ್ದರು.
ಇಂದು ಮುಂಜಾನೆ ಈಶ್ವರ ಮಲ್ಪೆ ನೇತೃತ್ವದ ತಂಡ ನಾಪತ್ತೆಯಾದ ಪೂರ್ಣೇಶ್ ಹುಡುಕಾಟಕ್ಕೆ ಆಗಮಿಸಿದ್ದು ಸತತ ಕಾರ್ಯಾಚರಣೆ ಮೂಲಕ ಪೂರ್ಣೇಶ್ ಮೃತ ದೇಹವನ್ನು ಪತ್ತೆ ಹಚ್ಚಲಾಯಿತು.
ತಾಲೂಕಿನ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟಿನಹೊಳೆ ಗ್ರಾಮದ ಮೂವರು ಯುವಕರು ತೆರಳುತ್ತಿದ್ದ ಉಕ್ಕಡ ಮಗುಚಿದೆ. ಪೂರ್ಣೇಶ (22) ಎಂಬ ಯುವಕ ನೀರು ಪಾಲಾಗಿದ್ದಾರೆ. ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಅದೃಷ್ಟವಶಾತ್ ಬದುಕುಳಿದಿದ್ದರು
NEWS HOSANAGARA.
Discover more from Prasarana news
Subscribe to get the latest posts sent to your email.
