
ಹೊಸನಗರ:ಸೂಕ್ತ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ದಿಢೀರನೆ ಮನೆಯನ್ನ ತೆರವು ಗೊಳಿಸಿದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಹೊಸನಗರ ಅರಣ್ಯ ಇಲಾಖೆ ಕಛೇರಿ ಮುಂಬಾಗ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ತಾಲೂಕಿನ ಕಸಬಾ ಹೋಬಳಿ, ಮಾರುತಿಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಅರಗೋಡಿ ಗ್ರಾಮದ ಸರ್ವೆ ನಂಬರ್:7 ರಲ್ಲೀ ನಾಗರಾಜ್ ಎಂಬುವರು ವಾಸವಿದ್ದ ಮನೆಯನ್ನು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ನೋಟೀಸ್ ಅನ್ನ ನೀಡದೆ ಏಕೈಕ ತೆರವು ಗೊಳಿಸಿದ್ದಾರೆ ಎಂದು ಆರೋಪಿಸಿ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ ಅಲ್ಲದೆ 40 ವರ್ಷಗಳಿಂದ ಅಲ್ಲಿಯೇ ವಾಸವಿದ್ದು ಈವರೆಗೂ ಸಹ ಕಂದಾಯ ಡಿಮ್ಯಾಂಡ್, ಹಾಗೂ ಅವರ ವಿಳಾಸವು ಸಹ ಅಲ್ಲಿಯೆ ಇದ್ದು ಏಕಾಏಕಿ ಈ ರೀತಿಯ ಕ್ರಮವನ್ನು ಕೈಗೊಂಡಿರುವುದನ್ನ ಗ್ರಾಮಸ್ಥರು ವಿರೋಧಿಸಿದ್ದಾರೆ.

ಕೂಲಿ ಮಾಡಿ ಜೀವನ ಸಾಗಿಸುವ ಬಡ ಕುಟುಂಬಕ್ಕೆ ವಾಸಿಸಲು ಮನೆ ಇಲ್ಲದಂತಾಗಿದ್ದು ಕೂಡಲೇ ಇಲಾಖೆ ಕೆಡವಿದ ಮನೆಯನ್ನು ಪುನಃ ನಿರ್ಮಿಸಿ ಕೊಡುವಂತೆ ಅವರು ಆಗ್ರಿದ್ದಾರೆ ಪ್ರತಿಭಟನೆಯಲ್ಲಿ ಅರಗೋಡಿ ಗ್ರಾಮಸ್ಥರು ಪಾಲ್ಗೊಂಡಿದ್ದು ಬಡ ಕುಟುಂಬಕ್ಕೆ ನ್ಯಾಯವನ್ನು ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.
FOREST DEPARTMENT.
Discover more from Prasarana news
Subscribe to get the latest posts sent to your email.
