
ಹೊಸನಗರ: ಜನವರಿ 27 ರಂದು ಹೊಸನಗರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ವೊಂದು ತಾಂತ್ರಿಕ ದೋಷದಿಂದ ಬೆಂಕಿ ಉಂಟಾಗಿ ಸುಟ್ಟು ಕರಕಲಾದ ಘಟನೆ, ಜನವರಿ 27 ರ ರಾತ್ರಿ 10. 30 ರ ಸುಮಾರಿಗೆ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅರಸಾಳು – ಸೂಡೂರು ಗ್ರಾಮಗಳ ನಡುವೆ ನಡೆದಿತ್ತು
ಘಟನೆಯಲ್ಲಿ ಬಸ್ ನಲ್ಲಿದ್ದ ಎಲ್ಲ ಪ್ರಯಾಣಿಕರು ಚಾಲಕ ಹಾಗೂ ನಿರ್ವಾಹಕನ ಪ್ರಾಮಾಣಿಕ ಕರ್ತವ್ಯ ನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.
ಹೊಸನಗರದಿಂದ ಬೆಂಗಳೂರಿಗೆ ಅನ್ನಪೂರ್ಣೇಶ್ವರಿ ಖಾಸಗಿ ಸ್ಲೀಪರ್ ಬಸ್ ರಾತ್ರಿ ಹೊರಟಿತ್ತು. ಸುಮಾರು 40 ಪ್ರಯಾಣಿಕರಿದ್ದರು. ಅರಸಾಳು – ಸೂಡೂರು ಗ್ರಾಮಗಳ ನಡುವೆ ಬಸ್ ಸಂಚರಿಸುತ್ತಿದ್ದ ವೇಳೆ, ಬಸ್ ನಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡಿದೆ.

ಕೆಲ ಪ್ರಯಾಣಿಕರು ಆತಂಕದಿಂದ ಕಿರುಚಿಕೊಂಡಿದ್ದಾರೆ. ತಕ್ಷಣವೇ ಬಸ್ ಚಾಲಕ ಬಸ್ ನ್ನು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾನರೆ. ಅಲ್ಲದೆ ಪ್ರಯಾಣಿಕರನ್ನ ಬಸ್ಸಿನಿಂದ ಹೊರಬರಲು ತನ್ನ ಪ್ರಾಣವನ್ನು ಲೆಕ್ಕಿಸದೆ ಸಹಾಯವನ್ನು ಮಾಡಿದ್ದಾರೆ ಈ ನಡುವೆ ಚಾಲಕ ದೇವರಾಜ್ ಬೆಂಕಿಯ ತೀವ್ರತೆಗೆ ಸಿಲುಕಿ ಗಂಭೀರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದು ಇದೀಗ ಬಸ್ ಮಾಲೀಕರಾದ ಸುದೀರ್ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದು ಮಾಲೀಕರೊಂದಿಗೆ ನಾವೆಲ್ಲರೂ ಕೈಜೋಡಿಸಿ ತನ್ನ ಪ್ರಾಣದ ಹಂಗು ತೊರೆದು ಪ್ರಯಾಣಿಕರನ್ನ ರಕ್ಷಿಸಿದ ಚಾಲಕ ದೇವರಾಜ್ ಹಾಗೂ ಅವರ ಕುಟುಂಬಕ್ಕೆ ನೆರವಾಗೋಣ.
HELPING HAND
