
ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಸವಿತಾ ಸಮಾಜ ಸಮುದಾಯಕ್ಕೆ ನಿವೇಶನ ಭೂಮಿಯನ್ನು ನೀಡುವಂತೆ ಸಮುದಾಯದ ಮುಖಂಡರು ಮೇಲಿನ ಬೇಸಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ ಮೇಲಿನ ಬೇಸಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2015ನೇ ಇಸವಿಯಿಂದ ಸವಿತ ಸಮಾಜ ಕ್ಷೌರಿಕರ ಸಂಘ ಡಿ ಆರ್ ನಂಬರ್ 162 ರಲ್ಲಿ ಸವಿತ ಸಮಾಜದ ಹೆಸರಿನಲ್ಲಿ ಕಂದಾಯವನ್ನು ಪಾವತಿಸಿ ರಶೀದಿಯನ್ನು ಪಡೆದುಕೊಂಡಿರುತ್ತೇವೆ ಆದರೆ ಈವರೆಗೂ ನಮಗೆ ಸೂಕ್ತ ನಿವೇಶನ ಭೂಮಿಯನ್ನ ಗುರುತಿಸಿ ಕೊಟ್ಟಿರುವುದಿಲ್ಲ ಆದ್ದರಿಂದ ದಯವಿಟ್ಟು ಸವಿತಾ ಸಮಾಜವನ್ನು ಗಣನೆಗೆ ತೆಗೆದುಕೊಂಡು ಸೂಕ್ತವಾದ ನಿವೇಶನ ಜಾಗವನ್ನು ಶೀಘ್ರವಾಗಿ ಒದಗಿಸಿಕೊಡುವಂತೆ ಮನವಿಯನ್ನು ಮಾಡಿದರು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮೇಶ್ ಕಾರ್ಯದರ್ಶಿಯಾದ ಕೌಶಿಕ್, ಗಣಪತಿ, ಹರೀಶ್, ಕೃಷ್ಣಮೂರ್ತಿ ಜಯದೇವ ಮುಂತಾದವರು ಉಪಸ್ಥಿತರಿದ್ದರು.
SAVITHA SAMAJA..
Discover more from Prasarana news
Subscribe to get the latest posts sent to your email.
