CIVIL SERVANT:                 ಪೌರ ಕಾರ್ಮಿಕರ ಮಕ್ಕಳು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು:ಗೋಪಾಲಕೃಷ್ಣ ಬೇಳೂರು…

ಹೊಸನಗರ:ಪಟ್ಟಣ ಸ್ವಚ್ಛವಾಗಿರಲು ದಿನನಿತ್ಯ ದುಡಿಯುವಂತೆ ಪೌರ ಕಾರ್ಮಿಕರ ಮಕ್ಕಳು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು  ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಹೊಸನಗರ ಪಟ್ಟಣ ಪಂಚಾಯತ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ವಿಶೇಷವಾಗಿದೆ. ಪೌರ ಕಾರ್ಮಿಕರ ದಿನಾಚರಣೆಯ ಮೂಲಕ ಅವರನ್ನು ಗೌರವಿಸುವುದರ ಜೊತೆಗೆ ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕನಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮ ಆರೋಗ್ಯ ಮತ್ತು ಕುಟುಂಬದ ನಿರ್ವಹಣೆಯನ್ನು ತ್ಯಾಗ ಮಾಡಿ ಸಮಾಜದ ಆರೋಗ್ಯಕ್ಕಾಗಿ ಚಳಿ ಗಾಳಿ ಮಳೆ ಲೆಕ್ಕಿಸದೆ ಪ್ರತಿದಿನ ಕಾರ್ಯ ನಿರ್ವಹಿಸುತ್ತಾರೆ. ಪೌರಕಾರ್ಮಿಕರ ಸೇವೆಯನ್ನು ಅತ್ಯಂತ ಶ್ರೇಷ್ಠವಾದದ್ದು, ಏಕೆಂದರೆ ಅವರು ಮಾಡುವ ತ್ಯಾಗದ ಮನೋಬಾವನೆ ಇನ್ನು ಯಾವುದೇ ವರ್ಗದ ಕಾರ್ಮಿಕರಿಗೆ ಬರಲು ಸಾಧ್ಯವಿಲ್ಲ. ಅನೇಕ ವರ್ಷಗಳಿಂದ ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಜೀವನದ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಅವರಿಗೆ ಈಗ ಮನೋ ಧೈರ್ಯ ತುಂಬಿದೆ. ಅಲ್ಲದೆ ಇನ್ನು ಕೆಲವು ಪೌರಕಾರ್ಮಿಕರದ ವಾಹನ ಚಾಲಕರು ನೀರು ಗಂಟಿಗಳು ಹಾಗೂ ಇನ್ನಿತರೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವವರ ಕಾಯಂ ಕೆಲಸಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಲಿದ್ದೇನೆ ಎಂದು ಭರವಸೆ ನೀಡಿದರು.


ಇದೇ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು ಜೊತೆಗೆ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾಕೂಟ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ ಉಪಾಧ್ಯಕ್ಷ ಚಂದ್ರಕಲಾ ನಾಗರಾಜ್, ತಹಸಿಲ್ದಾರ್ ರಶ್ಮಿ ಹೆಚ್ ಜೆ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹರೀಶ್ ಎಂಏನ್, ಸದಸ್ಯರಾದ ಅಶ್ವಿನಿ ಕುಮಾರ್, ಗುರುರಾಜ್, ಸಿಂತಿಯಾ ಸೇರವು, ಶಾಹಿನ ನಾಸಿರ್, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ಗುರುರಾಜ್, ನಿತ್ಯಾನಂದ ನೇತ್ರಾವತಿ ಪೌರಕಾರ್ಮಿಕ ಸಂಘದ ಅಧ್ಯಕ್ಷರಾದ ನಾಗಪ್ಪ ಉಪಾಧ್ಯಕ್ಷರಾದ ನಾಗರಾಜ್, ಆಶ್ರಯ ಸಮಿತಿ ಸದಸ್ಯ ರಾಧಿಕಾ ಉಪಸ್ಥಿತರಿದ್ದರು.

CIVIL SERVANT...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading