RIPPONPET NEWS: ರಿಪ್ಪನ್‌ಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ–ಕ್ರೀಡಾ ಚಟುವಟಿಕೆಗಳ ಉದ್ಘಾಟನೆ..

ರಿಪ್ಪನ್‌ಪೇಟೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025–26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌, ಯುರೆಡ್‌ಕ್ರಾಸ್‌, ರೆಡ್‌ರಿಬ್ಬನ್‌, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಗುರುವಾರ  ನಡೆಯಿತು.
ಕಾರ್ಯಕ್ರಮವನ್ನು ಶಾಸಕರಾಗಿರುವ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿ, “ಗ್ರಾಮೀಣ ವಿದ್ಯಾರ್ಥಿಗಳು ಭವಿಷ್ಯದ ನಾಯಕರಾಗಬೇಕಿದೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರದಿಂದ ಮೂಲಭೂತ ಸೌಕರ್ಯಗಳಿಗೆ ವಿಶೇಷ ಅನುದಾನ ಒದಗಿಸಲಾಗಿದೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಆಹಾರ ಸಿಗಲೆಂದು ಸಹಾಯಧನವನ್ನು ಹೆಚ್ಚಿಸಲಾಗಿದೆ” ಎಂದು ಹೇಳಿದರು.
ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅಗತ್ಯ” — ಆನಂದಪುರ ಶ್ರೀಗಳು
ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ, “ಜೀವನ ಕಟ್ಟಿಕೊಳ್ಳಲು ಶಿಕ್ಷಣ ಅತ್ಯಗತ್ಯ. ಉದ್ಯೋಗಕ್ಕಾಗಿ ಮಾತ್ರವಲ್ಲ, ಜ್ಞಾನಕ್ಕಾಗಿ ವ್ಯಾಸಂಗ ಮಾಡಬೇಕು. ಕೃಷಿಯ ಬಗ್ಗೆ ಕೀಳರಿಮೆ ತೋರಬಾರದು. ಹಿಂದೆ ಭಾರತ ಅಮೆರಿಕಾದಿಂದ ಗೋಧಿ ತಂದು ಶಾಲಾ ಮಕ್ಕಳಿಗೆ ಗೋಧಿ ರವೆ ಉಪ್ಪಿಟ್ಟು ನೀಡುವ ಕಾಲವಿತ್ತು. ಇಂದೀಗ ನಾವು ಕೃಷಿಯಲ್ಲಿ ಸ್ವಾವಲಂಬಿಗಳಾಗಿ ವಿದೇಶಗಳಿಗೆ ರಫ್ತು ಮಾಡುವ ರಾಷ್ಟ್ರವಾಗಿದ್ದೇವೆ. ಕೃಷಿ ಶಾಶ್ವತ ಕೈಂಕರ್ಯ, ಅದರ ಸವಾಲುಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ನೆನಪುಗಳ ಹಂಚಿಕೆ

ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳ ಮುಂದೆ ತಮ್ಮ ಬಾಲ್ಯದ ನೆನಪು ಹಂಚಿಕೊಂಡು, “ನಮ್ಮ ಕಾಲದಲ್ಲಿ ಅನ್ನಕ್ಕೇ ಪರದಾಡುವ ಸ್ಥಿತಿ ಇತ್ತು. ಸರ್ಕಾರಿ ಶಾಲೆಯಲ್ಲಿ ಗೋಧಿ ರವೆ ಉಪ್ಪಿಟ್ಟು ಸಿಕ್ಕಾಗ ಅದನ್ನು ತಿಂದು, ಕೆಲವೊಮ್ಮೆ ಶಿಕ್ಷಕರ ಬಡಿತವನ್ನೂ ತಿಂದೇ ವ್ಯಾಸಂಗ ಮಾಡಿದ್ದೆವು. ಆ ಕಷ್ಟಗಳು ನಮ್ಮ ಬದುಕಿನ ಪಾಠವಾಗಿವೆ” ಎಂದು ಹೃದಯಂಗಮವಾಗಿ ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ನಿರ್ಮಿತ “ಜೇನುಗೋಡು” ಸಭಾಂಗಣದ ನಾಮಫಲಕವನ್ನು ಉದ್ಘಾಟಿಸಲಾಯಿತು. ಪ್ರಾಚಾರ್ಯ ಪ್ರೋ. ಹೆಚ್.ಎಸ್. ವಿರೂಪಾಕ್ಷಪ್ಪ ರಚಿಸಿದ “ಕೃಷಿ ಸಂರಕ್ಷಣೆ ಮರು ಓದು” ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.
ಕೃಷಿ ಪ್ರಾತ್ಯಕ್ಷತೆ : ಪದವಿ ವಿದ್ಯಾರ್ಥಿಗಳಿಗೆ ಕೃಷಿಗಳ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಕೃಷಿ ಪ್ರಾತ್ಯಕ್ಷತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 30 ತಂಡಗಳಿಂದ ವಿದ್ಯಾರ್ಥಿಗಳ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದವರಿಗೆ ನಗದು ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುದೀಂದ್ರ ಪೂಜಾರಿ, ಸಿಡಿಸಿ ಸದಸ್ಯರು ಮಂಜುನಾಥ ಕಾಮತ್, ಪಿಯೂಸ್ ರೋಡ್ರಿಗಾಸ್, ಹರ್ಷ, ಶ್ರೀನಿವಾಸ ಅಚಾರ್, ವಿಜೇಂದ್ರ ಪುಟ್ಟಸ್ವಾಮಿ, ರಘು ಕೆ.ಚನಾಲ, ಕೆಡಿಪಿ ಸದಸ್ಯ ಅಶೀಫ್ ಭಾಷಾ, ಗ್ರಾಮ ಪಂಚಾಯಿತಿ ಸದಸ್ಯರು ಎನ್.ಚಂದ್ರೇಶ್, ನಿರೂಫ್ ಕುಮಾರ್, ರವೀಂದ್ರ ಕೆರೆಹಳ್ಳಿ, ಉಪನ್ಯಾಸಕರು ಕುಮಾರ ಎನ್., ರುದ್ರಮುನಿ, ವಿದ್ಯಾರ್ಥಿ ಪ್ರತಿನಿಧಿಗಳು ಕು. ಮಾನ್ಯಶ್ರಿ, ಕುಮಾರ ನಂದನ್ ಜಿ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ–ಸಿಬ್ಬಂದಿ ಹಾಜರಿದ್ದರು.

ನಂದನ್ ಪ್ರಾರ್ಥನೆ ಸಲ್ಲಿಸಿದರು. ಉಪನ್ಯಾಸಕ ಡಾ. ಎಂ.ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕಿ ಡಾ. ಸೌಮ್ಯ, ನಯನ ನಿರೂಪಣೆ ನಡೆಸಿ, ಹೆಚ್.ಎಂ.ಸಂಜಯ್‌ಕುಮಾರ್ ವಂದಿಸಿದರು.

RIPPONPET NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading