
ಹೊಸನಗರ : ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ನಿಟ್ಟಿನಲ್ಲಿ ನಿರ್ಮಿಸಿರುವ ನೂತನ ಬಸ್ ತಂಗುದಾಣವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಲೋಕಾರ್ಪಣೆ ಗೊಳಿಸಿದರು.2024-25 ನೇ ಸಾಲಿನ ಮಲೆನಾಡು ಪ್ರದೇಶ ಮಂಡಳಿ ಅನುದಾನದಲ್ಲಿ ನಿರ್ಮಿಸಿರುವ ತಂಗುದಾಣ ಕಾಮಗಾರಿಯನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿಉದ್ಘಾಟಿಸ ಲಾಯಿತು.ಈ ವೇಳೆ ಮಾತನಾಡಿದ ಶಾಸಕರು ಬಸ್ ತಂಗುದಾಣಗಳನ್ನು ವಿದ್ಯಾರ್ಥಿಗಳು ಗಾಳಿ, ಮಳೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ನಿರ್ಮಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.ಈ ವೇಳೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಜಿ ಎನ್ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಂದ್ರ, ದಿವ್ಯ, ಶಶಿಕಲಾ, ಸತೀಶ್, ವೆಂಕಟೇಶ್ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಚಿದಂಬರ್ ಹೂವಿನ ಕೋಣೆ, ಮುಖಂಡರಾದ ಸುಬ್ರಮಣ್ಯ ಮಾಸ್ತಿ ಕಟ್ಟೆ, ವಿನಯ್ ಕುಮಾರ್ ಡುಮ್ಮ, ಮಾಧು ಶೆಟ್ಟಿ, ಸುದೀಪ್, ಸದಾಶಿವ,ಗೋಪಿನಾಥ್, ಮಂಜುನಾಥ್, ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ ಮುಂತಾದವು ಹಾಜರಿದ್ದರು.
BUS STOP INAUGURATION..
Discover more from Prasarana news
Subscribe to get the latest posts sent to your email.
