PROTEST:C.T RAVI: ಸಿ. ಟಿ ರವಿ ಅವರ ಎಂ ಎಲ್ ಸಿ ಸದಸ್ಯತ್ವ ರದ್ದುಗೊಳಿಸಿ..

ಹೊಸನಗರ :ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಇಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಹಾಗೂ ಎಂ  ಎಲ್ ಸಿ ಸದಸ್ಯತ್ವ ರದ್ದುಗೊಳಿಸುವಂತೆ  ತಾಲೂಕು ದಂಡಾಧಿಕಾರಿಗಳ ಮೂಲಕವಾಗಿ ವಿಧಾನ ಪರಿಷತ್ ಸಭಾಪತಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ಚಂದ್ರ ಮೌಳಿ ಮಾತನಾಡಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ರವರ ಮೇಲೆ ಸದನದಲ್ಲಿ ಅತ್ಯಂತ ಕೆಟ್ಟ ಅಸಂಸದಿಯ ಪದ ಬಳಕೆಯನ್ನು ಮಾಡಿರುವ ಸಿಟಿ ರವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಒಬ್ಬ ಮಳೆಯ ವಿರುದ್ಧ ಇಂತಹ ಕೀಳು ಮಟ್ಟದ ಪದವನ್ನು ಬಳಸಿದ ಸಿಟಿ ರವಿ ಅವರ ಬೆಂಬಲಕ್ಕೆ ನಿಂತಂತಹ ಬಿಜೆಪಿಯ ಪರಿವಾರದವರ ಹೆಣ್ಣಿನ ಮೇಲಿನ ಗೌರವ ಎಷ್ಟೆಂಬುದನ್ನ ತೋರಿಸುತ್ತದೆ. ದೇಶ ಭಾಷೆ ಧರ್ಮದ ಬಗ್ಗೆ ಮಾತನಾಡುವ ಸಿಟಿ ರವಿ ಅವರು ಮೊದಲು ಮಹಿಳೆಯರಿಗೆ ಹೇಗೆ ಗೌರವವನ್ನು ನೀಡಬೇಕೆಂಬುದನ್ನ ಕಲಿತುಕೊಳ್ಳಲಿ ಎಂದರು.


ಬಳಿಕ ಮಾತನಾಡಿದ ಮಹಿಳಾ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಸುಮಸುಬ್ರಹ್ಮಣ್ಯ ಒಬ್ಬ ಮಹಿಳೆಯ ವಿರುದ್ಧ ಈ ರೀತಿಯ ಕೀಳು ಮಟ್ಟದ ಪದಬಳಕೆಯನ್ನು ಮಾಡುವಂತಹ ಸಿಟಿ ರವಿ ಸದನದಲ್ಲಿ ಅತ್ಯಂತ ಕೆಟ್ಟ ಅಸಂಸದೀಯ ಪದ ಬಳಕೆ ಮಾಡಿ ಇಡೀ ಮಾನವ ಕುಲಕ್ಕೆ ಮಹಿಳಾ ಸಮಾಜಕ್ಕೆ ಅವಾಚ್ಯ ಶಬ್ದ ಬಳಕೆ ಮಾಡಿದ್ದು ಹೆಯಾ ಕೃತ್ಯ ಅವರು ಪ್ರಚೋದನಕಾರಿ ಕೆಟ್ಟ ಮಾತುಗಳಿಂದ ಅಲ್ಪಸಂಖ್ಯಾತರ ವಿರುದ್ಧ ಮತ್ತು ಇತರೆ ರಾಜಕೀಯ ವಿರೋಧಿಗಳನ್ನು ಹಂಗಿಸುವ ಪ್ರವೃತ್ತಿಯನ್ನೇ ಬಳಸಿ ರಾಜಕೀಯವಾಗಿ ಮೇಲೇರಿದವರು ಹಲವು ಬಾರಿ ಶಾಸಕರಾದ ಅವರಿಗೆ ಒಬ್ಬ ಮಹಿಳೆಯ ವಿರುದ್ಧ ಹೇಗೆ ಮಾತನಾಡಬೇಕೆಂಬ ಕನಿಷ್ಠ ಪರಿಜ್ಞಾನ ಅವರಿಗೆ ಇಲ್ಲದಂತಾಗಿದೆ ಅದನ್ನು ಬೆಂಬಲಿಸುವ ಬಿಜೆಪಿಗರ ಮನಸ್ಥಿತಿಯೂ ಸಹ ಅವರಂತೆ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಂಡು ಅವರ ಎಂ ಎಲ್ ಸಿ ಸದಸ್ಯತ್ವ ರದ್ದುಗೊಳಿಸುವಂತೆ ಮನವಿಯನ್ನು ಮಾಡಿದರು ಈ ಸಂದರ್ಭದಲ್ಲಿ ಮಾಸ್ತಿ ಕಟ್ಟೆ ಸುಬ್ರಮಣ್ಯ, ಚಿದಂಬರ್, ಸದಾಶಿವ, ಮಂಜು ಸಣ್ಣಕ್ಕಿ ಮಹೇಂದ್ರ ಕುಮಾರ್, ನಾಗಪ್ಪ, ಶ್ರೀನಿವಾಸ್ ರೆಡ್ಡಿ, ಚಂದ್ರಕಲಾ, ಶಾಯಿನ ನಾಸಿರ್,ಗುರು ಜಯನಗರ, ಹಾಗೂ ಪಕ್ಷದ ಮುಖಂಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PROTEST:C.T RAVI


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe