
ಹೊಸನಗರ:ತಾಲ್ಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.ಗ್ರಾಮ ಪಂಚಾಯಿತಿಯಲ್ಲಿ ಏಕ ಪಕ್ಷಿಯ ನಿರ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅಧ್ಯಕ್ಷ ಶ್ರೀನಿವಾಸ್ ಅವರಲ್ಲಿ ವಿಶ್ವಾಸವಿಲ್ಲ ಎಂದು 7 ಮಂದಿ ಸದಸ್ಯರು ಸಾಗರ ಉಪ ವಿಭಾಗಾಧಿಕಾರಿ ಅವರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಇಂದು ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಎಚ್ ಜೆ ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯ ಸಭೆ ನಿಗದಿಯಾಗಿತ್ತು.
10 ಸದಸ್ಯ ಬಲದ ಪಂಚಾಯಿತಿಯಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರವಾಗಲು 7 ಸದಸ್ಯರ ಬೆಂಬಲ ಅಗತ್ಯವಾಗಿತ್ತು. ಆದರೆ, ಸಭೆಗೆ ಕೇವಲ 6 ಮಂದಿ ಸದಸ್ಯರು ಮಾತ್ರ ಹಾಜರಾದ್ದರಿಂದ ಕೋರಂ ಇಲ್ಲದೆ ಸಭೆ ನಡೆಯಲಿಲ್ಲ. ಅವಿಶ್ವಾಸ ನಿರ್ಣಯ ಸಭೆಯಲ್ಲಿ ಸದಸ್ಯರಾದ ಪೂರ್ಣಿಮಾ ಎನ್, ಜ್ಯೋತಿ, ಎಸ್ ಡಿ ಲಕ್ಷ್ಮಣ, ನಾಗರಾಜ್, ರಾಜೇಶ್ ಮೂರ್ತಿ ಟಿ ಎಂ, ಕೆ ಶಾಂತ ಪಾಲ್ಗೊಂಡಿದ್ದರೆ ಅವಿಶ್ವಾಸ ನಿರ್ಣಯ ಸಭೆಗೆ ಧರ್ಮಪ್ಪ ಗೈರಾಗಿದ್ದರು.
ಅವಿಶ್ವಾಸ ನಿರ್ಣಯ ಮಂಡನೆ ಸಭೆಯನ್ನು ಮುಂದೂಡಲು ಸಾಧ್ಯವಿಲ್ಲ ಹಾಗೂ ಮುಂದಿನ ಆರು ತಿಂಗಳು ಅವಿಶ್ವಾಸ ಮಂಡನೆ ಮಾಡಲು ಅವಕಾಶವಿಲ್ಲ ಎಂದು ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹೆಚ್ ಜೇ ತಿಳಿಸಿದರು.
PRESIDENT
Discover more from Prasarana news
Subscribe to get the latest posts sent to your email.
