
ಹೊಸನಗರ: ದೇಶದ ಪ್ರಧಾನಿ ಸೇರಿ ಬಿಜೆಪಿಯ ಎಲ್ಲಾ ಮುಖಂಡರುಗಳ ಹೇಳಿಕೆಗಳನ್ನು ಗಮನಿಸಿದರೆ ದೇಶದಲ್ಲಿ ಆಭದ್ರತೆಯನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ ಹಾಗೂ ಅವರು ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಪಚುನಾವಣೆಯ ಮೂರೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವನ್ನ ಸಾಧಿಸಲಿದೆ ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನ ನೀಡಲಿದ್ದಾರೆ ಎಂದರು.

ಅದರೆ ಬಿಜೆಪಿ ಚುನಾವಣೆಬಂದಾಗೆಲ್ಲ ಸುಳ್ಳು ವದಂತಿಗಳನ್ನು ಹರಡುವ ಕೆಲಸವನ್ನ ಮಾಡುತ್ತಿದೆ ದೇಶವನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವ ಉದ್ದೇಶ ಬಿಜೆಪಿಗಿಲ್ಲ ಚುನಾವಣೆಗಳನ್ನ ಗೆಲ್ಲಲು ನೀವು ಮಾಡಿದಂತಹ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಜನರಿಗೆ ತಿಳಿಸಿ ಅದರ ಬದಲಾಗಿ ಜಾತಿ ಧರ್ಮದ ಹೆಸರಿನಲ್ಲಿ ಗೊಂದಲಗಳನ್ನ ಸೃಷ್ಟಿ ಮಾಡುವ ಕೆಲಸವನ್ನು ಮಾಡಬೇಡಿ ಎಂದರು.ಗ್ಯಾರಂಟಿ ಯೋಜನೆ ದೂಷಿಸುವ ಬಿಜೆಪಿ ಕಾರ್ಯಕರ್ತರು ಯೋಜನೆಯನ್ನು ತಿರಸ್ಕಾರ ಮಾಡಲಿ. ನನಗೆ ಬೇಡ ಎಂದು ಯೋಜನೆಯಿಂದ ದೂರ ಉಳಿಯಲಿ ನೋಡೋಣ ಎಂದು ಸವಾಲು ಹಾಕಿದರು. ಈ ಪತ್ರಿಕಾಗೋಷ್ಠಿಯಲ್ಲಿ
ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರಮೌಳಿ, ಗುರುರಾಜ್.ಎಸ್, ಬಿಜಿ ನಾಗರಾಜ್, ಶ್ರೀನಿವಾಸ್, ಪ್ರಭಾಕರ, ಚಂದ್ರ ಮೂರ್ತಿ. ಮಹಾಬಲ, ಶಹೀನಾ ನಾಶೀರ್, ನಿತ್ಯಾನಂದ, ಗುರು ಜಯನಗರ. ಉಪಸಿದ್ಧರಿದ್ದರು
HOSANAGARA-PRESS MEET
Discover more from Prasarana news
Subscribe to get the latest posts sent to your email.
