HARATHALU HALAPPA: ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ: ಹರತಾಳು ಹಾಲಪ್ಪ

ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರ ಮರು
ಸ್ಥಾವನೆ ಆಗಬೇಕು ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಕೇಳಿ ಬಂದಿದ್ದು, ಈ ಬಗ್ಗೆ ಹಲವಾರು ಪ್ರತಿಭಟನೆ, ಹೋರಾಟ, ಬಂದ್ ಸಹ ಜರುಗಿವೆ. ಇದೇ ಎಪ್ರಿಲ್ 5 ಮತ್ತು 6 ನೇ ತಾರೀಖಿನಂದು ತಾಲೂಕಿನ ನಗರದಿಂದ ರಿಪ್ಪನ್ ಪೇಟೆ ವರೆಗೆ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿ ಕೊಂಡಿರುವ ಪಾದಯಾತ್ರೆಗೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷಾತೀತ, ಧರ್ಮಾತೀತ ಹಾಗು ಜಾತ್ಯಾತೀತ ಹೋರಾಟವನ್ನು ತಾಲೂಕಿನ ಜನತೆ ಸ್ವಾಗತಿಸಿದ್ದು, 2029ರ ವೇಳೆ ಕ್ಷೇತ್ರ ಮರು ಸ್ಥಾಪನೆ ಆಗುವ ಇಂಗಿತ ವ್ಯಕ್ತಪಡಿಸಿದರು.

ಈ ಹಿಂದೆ ತಾವು ಕ್ಷೇತ್ರದ ಶಾಸಕರಾಗಿದ್ದಾಗ ಕ್ಷೇತ್ರ ಪುನ‌ರ್ ವಿಂಗಡಣೆ ಕುರಿತು ಚರ್ಚೆ ನಡೆದಿತ್ತು. ಅಂದಿನ ಕೇಂದ್ರ ಸರ್ಕಾರ ಇದಕ್ಕಾಗಿ ಸೂಕ್ತ ರೂಪುರೇಷೆಗಳನ್ನು ಜಾರಿಗೊಳಿಸಲು ತಯಾರಿ ನಡೆಸಿತ್ತು. ಯಾವುದೇ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಸ್ತರು ಈ ಬಗ್ಗೆ ಯಾವುದೇ ಚಕಾರ ಎತ್ತದೆ ಇರುವುದು ಕ್ಷೇತ್ರ ಕೈಜಾರಿ ಹೋಗಲು ಕಾರಣವಾಯಿತು. ಆದರೆ, ಅಂದಿನ ತಾಲೂಕು ಬಿಜೆಪಿ ಅಧ್ಯಕ್ಷ ನಿವಣೆ ಸೀತಾರಾಮ ಭಟ್, ಕಾರ್ಯದರ್ಶಿ ವಾಟಗೋಡು ಸುರೇಶ್ ಸೇರಿದಂತೆ ಹಲವರು ಕ್ಷೇತ್ರ ಪುನರ್ ವಿಂಗಡಣೆ ಆಯೋಗದ ಸಭೆಯಲ್ಲಿ ಭಾಗವಹಿಸಬೇಕಿದ್ದ ದಿವಂಗತ ಕೇಂದ್ರ ಮಾಜಿ ಸಚಿವ ಅನಂತ ಕುಮಾರ್ ಅವರನ್ನು ಭೇಟಿ ಮಾಡಿಪುನರ್ ವಿಂಗಡಣೆ ಇಂದ ಕ್ಷೇತ್ರಕ್ಕೆ ಉಂಟಾಗುವ ಸಮಸ್ಯೆಗಳನ್ನು ಕುರಿತು ಚರ್ಚಿಸಿದ್ದರು. ಆದರೆ, ಯಾವುದೇ ಇತರೆ ರಾಜಕೀಯ ಪಕ್ಷಗಳಾಗಲಿ, ಯಾವುದೇ ಸಂಘ ಸಂಸ್ಥೆಗಳಾಗಲಿ, ಜನಾಂಗದ ಪ್ರಮುಖರಾಗಲಿ ಈ ಕುರಿತು ಧ್ವನಿ ಎತ್ತದೇ ಇರುವುದು ವಿಪರ್ಯಾಸದ ಸಂಗತಿ ಎಂದರು.

ಈಗ ಕಾಲ ಪಕ್ವವಾಗುತ್ತಿದೆ. ಇದೇ ಎಪ್ರಿಲ್ 16 ರಿಂದ ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ, ಸೇರಿದಂತೆ ಹಲವು ವಿಷಯಗಳ ಮೇಲೆ ಲೋಕಸಭಾ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಹಾಗೊಮ್ಮೆ ಸೂಕ್ತ ಚರ್ಚೆಗಳು ನಡೆದಲ್ಲಿ ಕ್ಷೇತ್ರ ಪುನ‌ರ್ ವಿಂಗಡಣೆ ವೇಳೆ ಮತ್ತೆ

ಹೊಸನಗರಕ್ಕೆ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ ಆಗುವ ಹೆಚ್ಚಿನ ಭರವಸೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಮಾಜಿ ಶಾಸಕ ಬಿ.ಸ್ವಾಮಿರಾವ್ ತಾಲೂಕು ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್, ಬಿ.ಯುವರಾಜ್, ಆಲುವಳ್ಳಿ ವೀರೇಶ್, ಎಂ.ಎನ್.ಸುಧಾಕರ, ಮೆಣಸೆ ಆನಂದ್, ಎನ್.ಆರ್ ದೇವಾನಂದ್, ಹಾಲಗದ್ದೆ ಉಮೇಶ್ ಗಣೇಶ್ ಹಿರೇಮಣತಿ, ಸುರೇಶ್ ಮೊದಲಾದವರು ಇದ್ದರು.

HARATHALU HALAPPA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading