PRESS MEET:ಉದ್ಯಮಿ ಸುಪ್ರದೀಪ್ ನವೀನ್ ಮೇಲಿನ ಹಲ್ಲೆ ಖಂಡನೀಯ..

ಹೊಸನಗರ:ಉದ್ಯಮಿ ಸಪ್ರದೀಪ್ ನವೀನ್ ಮೇಲೆ ಹೊಸನಗರ ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ಹಾಲಗದ್ದೆ ಉಮೇಶ್ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದು ಖಂಡನೀಯ ಒಬ್ಬ ಬಲಿಷ್ಠ ಸಮುದಾಯದ ಅಧ್ಯಕ್ಷ ನಿಂದ ಇಂತಹ ವರ್ತನೆಗಳು ಆಗಬಾರದು ಎಂದು ರಾಜ್ಯ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಂ ಎಸ್ ರವಿಕುಮಾರ್ ತಿಳಿಸಿದರು.
ಈ ಕುರಿತಾಗಿ  ಶುಕ್ರವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಪಾಲ್ಗೊಂಡು ಮಾತನಾಡಿ ಇತ್ತೀಚಿಗೆ ತಾಲೂಕು ಕಚೇರಿ ಆವರಣದಲ್ಲಿ ವಿದ್ಯುತ್ ಸಮಸ್ಯೆಗೆ ಕುರಿತಂತೆ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಉದ್ಯಮಿ ಸುಪ್ರದೀಪ ನವೀನ್ ಅವರ ಮೇಲೆ ಹಾಲಗದ್ದೆ ಉಮೇಶ ಎಂಬುವವರು ಸಾರ್ವಜನಿಕವಾಗಿ ಏಕಾಯಕಿ ಹಲ್ಲೆ ನಡೆಸಿದ್ದು ಅಬ್ಯಾಚ್ಚ ಶಬ್ದಗಳಿಂದ ನಿಂದಿಸಿದ್ದಾರೆ ಈ ಬಗ್ಗೆ ದೂರು ಸಹ ದಾಖಲಾಗಿದೆ.
ಆದರೆ ವ್ಯಕ್ತಿ ವ್ಯಕ್ತಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅಥವಾ ತಕರಾರುಗಳಿದ್ದರು ಅವುಗಳನ್ನು ಕಾನೂನಿನಡಿಯಲ್ಲಿ ಪರಿಹರಿಸಿಕೊಳ್ಳಬೇಕು, ವಿನಹ ಈ ರೀತಿ ಸಾರ್ವಜನಿಕವಾಗಿ ಹಲ್ಲೆ ನಡೆಸುವುದು ಸರಿಯಲ್ಲ ಅದು ಅಲ್ಲದೆ ಈ ಭಾಗದಲ್ಲಿ ಎಲ್ಲಾ ಸಮಾಜದ ಬಾಂಧವರು ಒಟ್ಟಾಗಿದ್ದು ಇಲ್ಲಿ ಸಮಾಜಗಳ ನಡುವೆ ಭಿನ್ನಾಭಿಪ್ರಾಯವನ್ನು ತರುವ ಕೆಲಸ ಎಂದಿಗೂ ಆಗಬಾರದು ಈ ಕೃತ್ಯ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂಥದ್ದು ಎಂದರು.
ಬಳಿಕ ಮಾತನಾಡಿದ ಉದ್ಯಮಿ ಸುಪ್ರದೀಪ್ ನವೀನ್. ಅವರು ಮತ್ತು ನನ್ನ ನಡುವೆ ಕೆಲವೊಂದು ವಿಚಾರಗಳಲ್ಲಿ ಕಾನೂನಿನ ಅಡಿಯಲ್ಲಿ ಒಂದಿಷ್ಟು ಪ್ರಕರಣಗಳು ನಡೆಯುತ್ತಿದ್ದು ಅದನ್ನ ಕಾನೂನಿನಡಿಯಲ್ಲಿ ಪರಿಹರಿಸಿಕೊಳ್ಳಬೇಕು ಅದನ್ನು ಹೊರತಾಗಿ ಈ ರೀತಿಯ ಬೆದರಿಕೆ ಹಾಕುವುದು ಹಾಗೂ ಹಲ್ಲೆಯನ್ನು ಮಾಡುವುದನ್ನು ನಿಲ್ಲಿಸಬೇಕು ಈ ಹಿಂದೆಯೂ ಸಹ ಅವರಿಂದ ಬಹಳಷ್ಟು ಬಾರಿ ನನ್ನ ಮೇಲೆ ಅಲ್ಲೇ ಪ್ರಯತ್ನ ನಡೆದಿದ್ದು ಆ ಕುರಿತಾಗಿ ಪ್ರಕರಣವನ್ನು ಸಹ ದಾಖಲಿಸಿದ್ದೇನೆ ಎಂದು ತಿಳಿಸಿದರು. ಬಳಿಕ ಮಾತನಾಡಿದ ತಾಲೂಕು ಬ್ರಾಹ್ಮಣ ಸಮಾಜದ ಸಂಚಾಲಕ ಕೆ ಎಸ್ ಸ್ವರೂಪ್ ಬ್ರಾಹ್ಮಣ ಸಮಾಜ ತಾಲೂಕಿನ ಎಲ್ಲ ಸಮಾಜದ ಜೊತೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದು ಇಂತಹ ಘಟನೆಗಳು ಸಮಾಜಗಳ ನಡುವೆ ಓಡುಕನ್ನು ಹುಟ್ಟು ಹಾಕುತ್ತವೆ ಇಂತಹ ಕೃತಿಗಳನ್ನು ಮುಂದೆ ಆಗದಂತೆ ನೋಡಿಕೊಳ್ಳುವುದು ಉತ್ತಮ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಮುದಾಯದ ಪ್ರಮುಖರಾದ ಡಿ ಆರ್ ವಿನಯ್ ಕುಮಾರ್ ದುಮ್ಮ, ಶ್ರೀಪತಿ ರಾವ್, ಗೋಪಿನಾಥ್, ಮುರುಳಿಧರ್, ರಮೇಶ್ ಹಲಸಿನ ಕಟ್ಟೆ. ಗಗನ್ ಗೌಡ ಉಪಸ್ಥಿತರಿದ್ದರು.

PRESS MEET.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe