SBI HOSANAGARA:ವಿಮಾ ಯೋಜನೆಯ ಪರಿಹಾರ ಮೊತ್ತ ತ್ವರಿತವಾಗಿ ಒದಗಿಸಿದ ಭಾರತೀಯ ಸ್ಟೇಟ್ ಬ್ಯಾಂಕ್, ಹೊಸನಗರ ಶಾಖೆ..

ಹೊಸನಗರ:ದಿನಾಂಕ 13.11.2025ರಂದು ಅನಾರೋಗ್ಯ ಕಾರಣದಿಂದಾಗಿ ಅಲ್ಪಕಾಲದಲ್ಲಿ ಹೊಸನಗರ ತಾಲೂಕಿನ ಬಾಳೆಕೊಪ್ಪ ನಿವಾಸಿ ಶ್ರೀಮತಿ ರತ್ನ ನಿಧನರಾಗಿದ್ದರು.ರತ್ನ ಅವರು ಹೊಸನಗರ sbi ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು.ಅವರು PMJJBY ಯೋಜನೆಯಡಿಯಲ್ಲಿ 436/- ಪಾವತಿಸಿ ಸಾಮಾಜಿಕ ಭದ್ರತೆಯ ವಿಮಾ ನೋಂದಣಿ  ಮಾಡಿಸಿಕೊಂಡಿದ್ದರು.
ಅವರ ಪತಿಯಾದ ಶ್ರೀ ಬಾಬು ಗೋಪಾಲ್ ಹಾಂಡ ಅವರು 23.12.2025ರಂದು ಬ್ಯಾಂಕನ್ನು ಸಂಪರ್ಕಿಸಿದಾಗ, ತ್ವರಿತವಾಗಿ ಯೋಜನೆಯ ಒಟ್ಟು ಮೊತ್ತ ರೂ.2 ಲಕ್ಷವನ್ನು 27ನೇ ಡಿಸಂಬರ್ 2025ರೊಳಗೆ ನಾಮಿನಿಯವರಿಗೆ ಜಮೆ ಮಾಡಿಸಲಾಯಿತು.
ಈ ಸಂಧರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಮಾಧವ್, ಅಧಿಕಾರಿಯಾದ ಸರ್ವೇಶ್ ಮತ್ತಿತ್ತರು ಉಪಸ್ಥಿತರಿದ್ದು, ಸರ್ಕಾರದ ಈ ಸಾಮಾಜಿಕ ಭದ್ರತಾ ವಿಮಾ ಯೋಜನೆಯನ್ನು ಸಾರ್ವಜನಿಕರು ನೋಂದಾಯಿಸಿಕೊಳ್ಳಲು ಮನವಿ ಮಾಡಿದ್ದಾರೆ.

SBI HOSANAGARA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe