KABBADI LEAGUE:ಹೊಸನಗರ ಜ.10 ರಂದು ಎರಡನೇ ಆವೃತ್ತಿ ಲೀಗ್ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ..

ಹೊಸನಗರ: ಹೊಸನಗರ ಗೆಳೆಯರ ಬಳಗ ಇದರ ಆಶ್ರಯದಲ್ಲಿ ಎರಡನೇ ಆವೃತ್ತಿಯ
ಹೊಸನಗರ, ಸಾಗರ, ತೀರ್ಥಹಳ್ಳಿ ಯ ಆಯ್ದ ಕ್ರೀಡಾಪಟುಗಳು ಲೀಗ್ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಜನವರಿ 10 ಶನಿವಾರದಂದು ಮಲ್ನಾಡ್ ಟ್ರೋಫಿ, 2026 ರನ್ನು  ಸಂಜೆ 7ರಿಂದ ನೆಹರು ಕ್ರೀಡಾಂಗಣದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ ಎಂದು ಮಲ್ನಾ ಟ್ರೋಫಿ  ಆಯೋಜ ಅಧ್ಯಕ್ಷರಾದ ಶರತ್ ಮೆಣಸು ತಿಳಿಸಿದರು.
ಈ ಕುರಿತಾಗಿ ಮಾತನಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದು ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮಹೇಂದ್ರ ಬೆಂಗಳೂರು ವಿಶೇಷ ಆಹ್ವಾನಿಕರಾಗಿ ಆಗಮಿಸಲಿದ್ದಾರೆ ಜೊತೆಗೆ ಕ್ಷೇತ್ರದ ವಿವಿಧ ಪಕ್ಷದ ಮುಖಂಡರುಗಳು ಉದ್ಯಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು  ಕ್ರೀಡಾಕೂಟದಲ್ಲಿ ಕಬ್ಬಡಿ ಕ್ರೀಡಾ ಪ್ರೋತ್ಸಾಹಕರ ಮಾಲೀಕತ್ವದ 10 ತಂಡಗಳು ಭಾಗವಹಿಸಲಿದ್ದು ಪ್ರಥಮ ಬಹುಮಾನವಾಗಿ 40000 ದ್ವಿತೀಯ ಬಹುಮಾನವಾಗಿ 30,000 ದ್ವಿತೀಯ ಬಹುಮಾನವಾಗಿ ತೃತಿಯ ಬಹುಮಾನವಾಗಿ 20,000 ಹಾಗೂ ಆಕರ್ಷಕ ಟ್ರೋಫಿ ಎನ್ನ ನೀಡಿ ಗೌರವಿಸಲಾಗುವುದು ಜೊತೆಗೆ ಚತುರ್ಥಕ ಬಹುಮಾನವಾಗಿ ಆಕರ್ಷಿಕ ಟ್ರೋಫಿಯನ್ನು ನೀಡಲಿದ್ದೇವೆ ಎಂದು ತಿಳಿಸಿದರು.
ಹಾಗೆಯೇ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಜೊತೆಗೆ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದೆ ಅಲ್ಲದೆ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಅಖಿಲೇಶ್ ಶೆಟ್ಟಿ ಅಭಿ ಪೂಜಾರಿ ಭರತ್ ಮೆಣಸೆ ಪ್ರಶಾಂತ್ ಆದಿತ್ಯ ಮುಂತಾದವರು ಉಪಸ್ಥಿತರಿದ್ದರು.

KABBADI LEAGUE...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading